ಮೂಡಿಗೆರೆ: ಮೋದಿ ಜನ್ಮ ದಿನಾಚರಣೆಯ ಪ್ರಯುಕ್ತ ನಗರದ ಗಂಗಾಧರೇಶ್ವರ ದೇವಾಲಯದ ಸುತ್ತಮುತ್ತ ಬಿಜೆಪಿ SC ಮೋರ್ಚಾ ಕಾರ್ಯಕರ್ತರು ಸ್ವಚ್ಛತೆ ಕಾರ್ಯಕ್ಕೆ ಮುಂದಾದರು.
ಬಿಜೆಪಿ SC ಮೋರ್ಚಾ ಮೂಡಿಗೆರೆ ಮಂಡಲದ ವತಿಯಿಂದ ಸೇವಾ ಪಾಕ್ಷಿಕ ಹಾಗೂ ಮೋದಿ ಜನ್ಮ ದಿನದ ಪ್ರಯುಕ್ತ ಪಟ್ಟಣದ ಗಂಗದೇಶ್ವರ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ SC ಮೋರ್ಚಾ ಅಧ್ಯಕ್ಷ ಸಚಿನ್ ಬಾನಳ್ಳಿ ಮಾತನಾಡಿ, ನಗರವನ್ನು ಸ್ವಚ್ಛ, ಚೊಕ್ಕವಾಗಿಡುವುದೇ ನಮ್ಮ ಮುಖ್ಯ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯು ಕಾರ್ಯಕರ್ತರಿಗೆ ಹೇಳಿಕೊಟ್ಟಿರುವ ಸಂಸ್ಕೃತಿ ಕೂಡ ಇದೆ ಆಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಹಂತ ಹಂತವಾಗಿ ಯೋಜನೆ ರೂಪಿಸಲಾಗುವುದು ಎಂದರು.
ಭಾರತೀಯ ಜನತಾ ಪಕ್ಷದ SC ಮೋರ್ಚಾ ಕಾರ್ಯಕರ್ತರು ಸುಮಾರು ೧೦ಕ್ಕೂ ಹೆಚ್ಚು ಚೀಲಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಆಯ್ದು ದೇವಾಲಯದ ಮೈದಾನವನ್ನು ಸ್ವಚ್ಛಗೋಳಿಸಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮ ದಲ್ಲಿ ಮಂಡಲ ಅಧ್ಯಕ್ಷ ಗಜೇಂದ್ರ ತರುವೆ,ಪ್ರಧಾನ ಕಾರ್ಯದರ್ಶಿ ರತನ್ ಊರುಬಗೆ,
ಮಹಿಳಾ ಮೋರ್ಚ ಕಾಮಕ್ಷಿ, ರಘುಪತಿ ಬಾಳೂರು, ಸುಜೀತ್ ಹಳೇ ಮೂಡಿಗೆರೆ, ರಾಜು ಕಡಿದಾಳ್, ಮಿಥುನ್ ಮುತ್ತಿಗೆಪುರ, ಹಳೇಮೂಡಿಗೆರೆ ಪ್ರಸನ್ನ, ಶರತ್ ಮಾಕೋನಹಳ್ಳಿ, ಸುನೀಲ್ ಊರುಬಗೆ, ಶರತ್ ಬಿನ್ನಡಿ, ಪ್ರಶಾಂತ್ ರಾಮ್ ಹಳೇಕೊಟೆ, ಸತೀಶ್ ಮಕೋನಹಳ್ಳಿ, ಮನೋಜ್ ಬಾನಹಳ್ಳಿ ಉಪಸ್ಥಿತರಿದ್ದರು
