ಚಿಕ್ಕಮಗಳೂರು:ಹೆಚ್.ಡಿ. ಕೀರ್ತಿಕುಮಾರ್ ಅವರು ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಭಾರತ ದೇಶದ 80ನೇ ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನ ಮಾಡಲಾಯಿತು.

ಇವರು ಮೂಡಿಗೆರೆ ತಾಲೂಕು, ಗೋಣಿಬೀಡು ಹೋಬಳಿ, ಹೆಗ್ಗರವಳ್ಳಿ ಗ್ರಾಮದಲ್ಲಿ ಜನಿಸಿ, ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷಗಳ ಸೇವೆ, ವಿದೇಶದ ಶಾಂತಿ ಪಾಲನಾಪಡೆಯಲ್ಲಿ, ಕಾಂಗೋ, ಲೆಬನಾನ್, ನೈಜೀರಿಯಾ, ಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ನಮ್ಮ ನೆರೆಯ ದೇಶಗಳಾದ ಭೂತಾನ್ ಬಾಂಗ್ಲಾ ಬರ್ಮಾ ಶ್ರೀಲಂಕಾಗಳಲ್ಲಿ, ಗುರುತರ ಸೇವೆಯನ್ನು ಸಲ್ಲಿಸಿರುವರು, ಇವರ ಸಾಮಾಜಿಕ ಕಾರ್ಯಗಳು, ಪರಿಸರ ಕಾಳಜಿ, ಅನಾಥಾಶ್ರಮ ಮತ್ತು ವೃದ್ರಾಶ್ರಮಗಳಿಗೆ ಸಹಾಯ, ಸೈನ್ಯದಲ್ಲಿ ಗುರುತರವಾದ ಸೇವೆ ಮುಂತಾದುಗಳನ್ನು ಪರಿಗಣಿಸಿ ತಮಿಳುನಾಡು ವಿಶ್ವವಿದ್ಯಾನಿಲಯ ಗುರುತಿಸಿ ಗೌರವಿಸಿರುವ “ಗೌರವ ಡಾಕ್ಟರೇಟ್”ನೀಡಿ ಗೌರವಿಸಿದೆ.
2013ರಲ್ಲಿ ಸೇನೆಯಿಂದ ಬಂದ ನಂತರ, ಕೃಷಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿ, ಕಾರ್ಪೊರೇಟ್ ಕಂಪನಿಗಳಾದ ಇನ್ಫೋಸಿಸ್ ಮತ್ತು ವಿಪ್ರೋಗಳಲ್ಲಿ, ಉತ್ತಮ ಸೇವೆ ಸಲ್ಲಿಸಿ, ತದನಂತರ ದಾರವಾಡಕ್ಕೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಅನೇಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುತ್ತಾರೆ.
2016ರ ಬ್ಯಾಚ್ ಪೊಲೀಸ್ ಉಪನಿರೀಕ್ಷಕ ನಾಗಿ ಕಾನೂನು ಸುವ್ಯವಸ್ಥೆ ಮತ್ತು ಕಳ್ಳತನ ಅಪರಾಧ ಪತ್ತೆ ಕಾರ್ಯದಲ್ಲಿ ತೊಡಗಿ, ದಕ್ಷ ರೀತಿಯಿಂದ ಸೇವೆ ಸಲ್ಲಿಸುತ್ತಿರುವರು,ಜನರ ಸೇವೆ ನಿಮ್ಮ ಸಮಾಜಮುಖಿ ಕೆಲಸಗಳು ಮತ್ತಷ್ಟು ಹೆಚ್ಚು ಮಾಡುವಂತಾಗಲಿ ಎಂದು ಆಶಿಸೋಣ.
