Saturday, September 26, 2026
Homeಜಿಲ್ಲಾಸುದ್ದಿಕಾಫಿನಾಡಲ್ಲಿ ಗಣಪತಿ ವಿಸರ್ಜನೆಗೆ ಕ್ಷಣಗಣನೆ: ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಖಾಕಿ ಸರ್ಪಗಾವಲು!

ಕಾಫಿನಾಡಲ್ಲಿ ಗಣಪತಿ ವಿಸರ್ಜನೆಗೆ ಕ್ಷಣಗಣನೆ: ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಖಾಕಿ ಸರ್ಪಗಾವಲು!

Telegram Group
Join Now

ಚಿಕ್ಕಮಗಳೂರು ಹಾಗೂ ಮೂಡಿಗೆರೆಯಲ್ಲಿ ಇಂದು ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವಗಳು ಅದ್ಧೂರಿಯಾಗಿ ನೆರವೇರಲಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕಲ್ಪಿಸಿದೆ.

ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿರುವ ಈ ಭವ್ಯ ಶೋಭಾಯಾತ್ರೆಗೆ 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 4 ಕೆಎಸ್‌ಆರ್‌ಪಿ ಮತ್ತು 2 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಲು ಡ್ರೋನ್ ಕ್ಯಾಮೆರಾಗಳು, ಸಿಸಿಟಿವಿ ಜಾಲ, ಎತ್ತರದ ಕಟ್ಟಡಗಳ ಮೇಲೆ ಸ್ಕೈ ಸೆಂಟ್ರಿ ಹಾಗೂ ನಿರಂತರ ಮೊಬೈಲ್ ಗಸ್ತು ವ್ಯವಸ್ಥೆ ಮಾಡಲಾಗಿದೆ.

ಉತ್ಸವದ ಸಂಭ್ರಮದ ನಡುವೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಾಯ್ಮಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!