ಚಿಕ್ಕಮಗಳೂರು : ಪುರಸಭೆ ಅಕ್ರಮ ಪ್ರಶ್ನಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಕ್ಕೆ ರೊಚ್ಚಿಗೆದ್ದ ಮಹಿಳೆ ಶಾಂತಾಳಿಂದ ದೂರುದಾರನ ಮೇಲೆ ಕಪಾಳ ಮೋಕ್ಷ ಮಾಡಿರುವ ಘಟನೆ ಕಡೂರು ಪಟ್ಟಣದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಡೆದಿದೆ.
ಹೌದು ..ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿ ಮನೆ ಕಟ್ಟುತ್ತಿದ್ದು ಇದನ್ನ ವಿರೋಧಿಸಿ ಮಾಜಿ ಕೌನ್ಸಿಲರ್ ಶೈಲಾ, ಪುತ್ರ ಚಂದ್ರಮಾನ್ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಮೌನ ಪ್ರತಿಭಟನೆ ನಡೆಸಿ ದೂರು ನೀಡಿದ್ದ ದೂರುದಾರ ಇದಕ್ಕೆ ಕೋಪಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆ ಶಾಂತ ಪೊಲೀಸರ ಎದುರಲ್ಲೇ ಕಪಾಳ ಮೋಕ್ಷ ಮಾಡಿದ್ದಾರೆ. ಹಲ್ಲೆಗೊಳಗಾದ ದೂರುದಾರ ಚಂದ್ರಮಾನ್ ಆಸ್ಪತ್ರೆಗೆ ದಾಖಲಾಗಿದ್ದು ಕಪಾಳಮೋಕ್ಷ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಸೈಟ್ ನಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು ಕಡೂರು ಪುರಸಭೆ ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿ ಆರೋಪ ಹೀಗಾಗಿ ಅಕ್ರಮ ಗೊತ್ತಿದ್ದರೂ ತನಿಖೆ ನಡೆಸದೆ ಅಧಿಕಾರಿಗಳ ಕಳ್ಳಾಟ ಮಾಡುತ್ತಿದ್ದಾರೆಂದು ರೊಚ್ಚಿಗೆದ್ದು ಪೊಲೀಸರೆದುರೇ ಮಹಿಳೆ ಕಪಾಳಮೋಕ್ಷ ಮಾಡಿದ್ದಾರೆ.
