Monday, August 10, 2026
Homeಕ್ರೈಮ್ಉಡುಪಿಯಲ್ಲಿ ಹಾಡಹಗಲೇ ರೌಡಿಶೀಟರ್ ಸೈಫುದ್ದೀನ್ ಬರ್ಬರ ಹತ್ಯೆ

ಉಡುಪಿಯಲ್ಲಿ ಹಾಡಹಗಲೇ ರೌಡಿಶೀಟರ್ ಸೈಫುದ್ದೀನ್ ಬರ್ಬರ ಹತ್ಯೆ

Telegram Group
Join Now

ಉಡುಪಿ; ಹಾಡಹಗಲೇ ರೌಡಿಶೀಟರ್ ಸೈಫುದ್ದೀನ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಲ್ಪೆ ಠಾಣೆ ವ್ಯಾಪ್ತಿಯ ಕೊಡವೂರು ಬಳಿ ಸೈಫುದ್ದೀನ್ ನನ್ನು ಕೊಲೆ ಮಾಡಲಾಗಿದೆ.

ಮಣಿಪಾಲ ಸಮೀಪದ ಆತ್ರಾಡಿಯ ನಿವಾಸಿಯಾದ ಸೈಫುದ್ದೀನ್ ಕೊಡವೂರಿನ ತನ್ನ ಮನೆಯಲ್ಲಿದ್ದಾಗಲೇ ಒಳಗೆ ನುಗ್ಗಿದ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಸ್ಥಳಕ್ಕೆ ಉಡುಪಿ ಎಸ್ ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು , ಮೂವರು  ಕೃತ್ಯ ಎಸಗಿರುವ ಶಂಕೆ ಇದೆ. ಬೆಳಗಿನ ಜಾವ 10ರಿಂದ 11 ಗಂಟೆಯ ನಡುವೆ ದುಷ್ಕೃತ್ಯ ನಡೆದಿದೆ .ಸೈಫ್ ಮೇಲೆ 18 ಕ್ರಿಮಿನಲ್ ಕೇಸುಗಳಿವೆ.ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ ಎಂದು ಹೇಳಿದ್ದಾರೆ.

ಸೈಫ್ ಎರಡು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.ಇಂದು ಮೂರು ಜನ ಆರೋಪಿಗಳು ಏಕಕಾಲದಲ್ಲಿ ಅಟ್ಯಾಕ್ ಮಾಡಿದ್ದಾರೆ.ಆರೋಪಿಗಳು ಸೈಫ್ ನ AKMS ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಾರೆ.ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಕೊಲೆಗೆ ನಿಖರ ಕಾರಣ ತನಿಖೆಯಿಂದ ಬಹಿರಂಗವಾಗುತ್ತದೆ ಎಂದಿದ್ದಾರೆ.ಚಾಕು ಮತ್ತು ತಲವಾರ್ ನಿಂದ ದಾಳಿ ಮಾಡಿದ್ದಾರೆ.ಸೊಕೋ ಟೀಮ್ ಇನ್ನಷ್ಟೇ ಸ್ಥಳಕ್ಕೆ ಬರಬೇಕಾಗಿದೆ. ದೇಹದ ಹಲವೆಡೆ ಇರಿದ ಗಾಯಗಳಿವೆ.ಮಲ್ಪೆಯ ಮನೆಯಲ್ಲಿ ಒಬ್ಬರೇ ಇದ್ದಾಗ ಅಟ್ಯಾಕ್ ಆಗಿದೆ.ಈ ಹಿಂದಿನ ಕೊಲೆಗಳಿಗೆ ಪ್ರತಿಕಾರದ ಕೃತ್ಯವಾ ಎಂಬುದು ತನಿಖೆಯಿಂದ ಗೊತ್ತಾಗಬೇಕಾಗಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments