ಮೂಡಿಗೆರೆ: ಕೊಟ್ಟಿಗೆಹಾರ ಹಾಗೂ ಹೊರನಾಡು ಮಾರ್ಗದ ರಸ್ತೆ ದುರಸ್ಥಿಗೆ ಬಿಜೆಪಿ ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಜಾವಳಿ ಒತ್ತಾಯ ಮಾಡಿದ್ದಾರೆ.
ಹೌದು .. ಪ್ರಖ್ಯಾತ ದೇವಾಲಯದ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿದಾನಕ್ಕೆ ಮೂಡಿಗೆರೆ -ಕೊಟ್ಟಿಗೆಹಾರ ಮಾರ್ಗವಾಗಿ ಹೊರನಾಡು ಸಾಗುವ ರಸ್ತೆ ಸಂಪೂರ್ಣಹಾಳಾಗಿದ್ದು ರಸ್ತೆ ದುರಸ್ಥಿಗೊಳಿಸುವಂತೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಜಾವಳಿ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೊಟ್ಟಿಗೆಹಾರ ಹಾಗೂ ಹೊರನಾಡು ಹೋಗುವ ರಸ್ತೆ ತೀವ್ರ ಹದಗೆಟ್ಟಿದೆ. ಸಾವಿರಾರು ಭಕ್ತಾದಿಗಳು, ಪ್ರವಾಸಿಗರು ದಿನನಿತ್ಯ ಪ್ರಯಾಣಿಸುವ ಮುಖ್ಯ ರಸ್ತೆಯಾಗಿದೆ ಈ ಮಾರ್ಗ ಮದ್ಯೆ ದೊಡ್ಡ ದೊಡ್ಡ ಗುಂಡಿಗಳಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸರಿ ಪಡಿಸುವಂತೆ ಆಗ್ರಹಿಸಿದರು.
