ಮೂಡಿಗೆರೆ : ಮಾಜಿ ಸಂಸದ ದಿ. ಡಿ. ಬಿ. ಚಂದ್ರೆಗೌಡ ನೆನಪಾರ್ಥ ಅಂಗವಾಗಿ ಅಂಗನವಾಡಿ ಕೇಂದ್ರಗಳಿಗೆ ಪೀಟೋಪಕರಣಗಳನ್ನ ವಿತರಣೆ ಮಾಡಲಾಯಿತು.

ಹೌದು .. ಮಾಜಿ ಸಂಸದ ಡಿಬಿಸಿ ನೆನಪಾರ್ಥ ಇವರ ಕುಟುಂಬ ಧರ್ಮಪತ್ನಿ ಪೂರ್ಣಚಂದ್ರ, ಪುತ್ರಿಯರಾದ ಪಲ್ಲವಿ ರಾಮ್. ಶ್ರುತಿ ಹಳೇಕೋಟೆ, ಸಂಗೀತ ಕುಟೀರ,ವೀಣಾ ಇವರುಗಳು ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಗಾಡ್ರೆಜ್ ಹಾಗೂ ಟೇಬಲ್ ಗಳನ್ನು ವಿತರಿಸಿದರು.
ಹಾಗೆ ಡಿ.ಬಿ. ಚಂದ್ರೇಗೌಡ ಕುಟುಂಬದವರ ಅನುಪಸ್ಥಿತಿಯಲ್ಲಿ ಇವರ ಸಂಗಡಿಗರು ಕಡಿದಾಳು, ಕೆಸವಳಲು, ದಾರದಹಳ್ಳಿ ಸೇರಿದಂತೆ ಸುಮಾರು 10 ಅಂಗನವಾಡಿ ಕೇಂದ್ರಗಳಿಗೆ ಪಿಟೋಪಕರಣಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಡಿ.ಬಿ. ಚಂದ್ರೇಗೌಡ ಕುಟುಂಬದ ಆಪ್ತ ಮಜೀದ್ ಕಿತ್ತಲೆಗಂಡಿ ಸೇರಿದಂತೆ ಅನೇಕರು ಇದ್ದರು.
