ಮೂಡಿಗೆರೆ: ಹಾಸನ ಸೈನ್ಸ್ ಕಾಲೇಜ್ ಕ್ರೀಡಾಂಗಣದಲ್ಲಿ ಮೂರನೇ ವರ್ಷದ ಸೀಮಿತ ಓವರಗಳ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಯಿತು
ಈ ಪಂದ್ಯಾವಳಿಯಲ್ಲಿ ಹಾಸನಾಂಬ ಕ್ರಿಕೆಟರ್ಸ್ ವಿರುದ್ಧ ರೋಚಕ ಮೂಡಿಗೆರೆ ಸ್ಟಾರ್ ತಂಡ ವಿಜಯ ಪತಾಕೆ ಹಾರಿಸಿದೆ
ಮಧು ಹೆಗ್ಗರವಳ್ಳಿ ನಾಯಕತ್ವದ ಮೂಡಿಗೆರೆ ಸ್ಟಾರ್ ತಂಡ ಭರ್ಜರಿ ಗೆಲುವಿನ ಕೇಕೆ ಹಾಕಿದರು. ಹಾಸನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 8 ರನ್ ಗಳ ರೋಚಕ ಜಯ ದಾಖಲಿಸಿತು.
ಕನ್ನಡಾಂಬೆ ಕಪ್ ಕ್ರೀಡಾಕೂಟದಲ್ಲಿ ಸೋಲಿಲ್ಲದ ಸರದಾರನಾಗಿ ಮೂಡಿಗೆರೆ ಸ್ಟಾರ್ ತಂಡ ವಿಜೃಂಭಿಸಿತು.
ಮೂಡಿಗೆರೆ ಸ್ಟಾರ್ ತಂಡ ನೀಡಿದ 52 ರನ್ ಗಳ ಗುರಿಯನ್ನು ಬೆನ್ನಹತ್ತಿದ ಹಾಸನಾಂಬ 6 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 46 ನ್ ಗಳಿಸಲು ಮಾತ್ರ ಶಕ್ತಿವಾಯಿತು..
ಪವರ್ ಪ್ಲೇ ಆಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸ್ಟಾರ್ ತಂಡಕ್ಕೆ ಮೂಡಿಗೆರೆ ಪರಿಸರದ ಹೊಡೆ ಬಡೆ ಆಟಗಾರ ಪುನೀತ್ ತಂಡಕ್ಕೆ ಆಸರೆಯಾದರು
ಖಾಲಿದ್. ಮಧು. ಶೈಲೇಶ್ ತಾಳ್ಮೆಯ ಆಟವಾಡಿ ರನ್ ಗಳಿಸುತ್ತಾ ಹೋದರು.
ಮೂಡಿಗೆರೆ ಸ್ಟಾರ್ ತಂಡದ ಬ್ಯಾಟ್ಸಮ್ಯಾನ್ ಗಳು ಹಾಸನಾಂಬ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿ. ತಂಡವನ್ನು ಗೆಲುವಿನ ಮಾಲೆಗೆ ಸಾಕ್ಷಿಯಾದರು.
ಹಾಸನ ತಂಡವನ್ನು ಕಟ್ಟುಹಾಕುವಲ್ಲಿ. ಸ್ಟಾರ್ ಮೂಡಿಗೆರೆ ತಂಡದ ಬೌಲರ್ ಗಳ ಶ್ರಮ ಮೆಚ್ಚುವಂತದ್ದು.
ಕ್ರೀಡಾಕೂಟದಲ್ಲಿ ಅದ್ಬುತ ಪ್ರದರ್ಶನ ನೀಡಿದ ಪುನೀತ್ ಬೈದುವಳ್ಳಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ. ಮ್ಯಾನ್ ಆಫ್ ದಿ ಸಿರೀಸ್. ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರೂ
ಪಂದ್ಯದ ಉದ್ದಕ್ಕೂ ಹೀರೋ ಆಗಿ ವಿಜೃಂಭಿಸಿದ ಪುನೀತ್ ಬೈದುವಳ್ಳಿ ಅಮೋಘ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ಅದ್ಬುತ ರನ್ ಕಲೆ ಹಾಕಿ ತಂಡದ ಗೆಲುವಿಗೆ ಕಾರಣರಾದರೂ.
ಹಾಸನಾಂಬ ತಂಡದ ಆರಂಭಿಕ ಆಟಗಾರರು ಹಾಗೂ ಮಧ್ಯಮ ಕ್ರಮದ ಆಟಗಾರರ ವೈಪಲ್ಯ ತಂಡದ ಸೋಲಿಗೆ ಕಾರಣವಾಗಿದೆ
ಪ್ತಥಮ ಬಹುಮಾನವಾಗಿ 60000 ನಗದು ಮತ್ತು ಟ್ರೋಫಿಯನ್ನು ಸ್ಟಾರ್ ಮೂಡಿಗೆರೆ ತನ್ನದಾಗಿಸಿಕೊಂಡಿದೆ.
ಮೂಡಿಗೆರೆ ಸ್ಟಾರ್ ತಂಡದ ಯುವ ಆಟಗಾರರಿಗೆ. ಈ ತಂಡದ ಮಾಜಿ ಆಟಗಾರರು ಶುಭಾಶಯ ತಿಳಿಸಿದ್ದು,, ತಂಡದ ನಾಯಕ ಮಧು ಹೆಗ್ಗರವಳ್ಳಿ, ಪೊಲೀಸ್ ಮಹೇಶ್. ಖಾಲಿದ್ ಅವರನ್ನು ಶ್ಲಾಘಿಸಿದ್ದಾರೆ.
ಈ ಕ್ರೀಡಾಕೂಟದಲ್ಲಿ. ತಂಡದ ನಾಯಕ ಮಧು ಹೆಗ್ಗರವಳ್ಳಿ, ಉಪನಾಯಕ ಖಾಲಿದ್, ಅಲ್ಲರೌಂಡರ್ ಶೈಲೆಶ್,ರಾಜ, ಬ್ಯಾಟ್ಸಮ್ಯಾನ್ ಸೌರವ್, ಬೌಲರ್ ನಿತಿನ್, ಮಧ್ಯಮ ವೇಗಿ ಸುಪ್ರೀತ್ , ಬ್ಯಾಟ್ಸಮ್ಯಾನ್ ಗೌತಮ್. ಲೆಫ್ಟ್ ಕಿರಣ. ಅಲ್ರೌನ್ಡರ್ ಪುನೀತ್, ಬ್ಯಾಟ್ಸಮ್ಯಾನ್ ಶಿಶಿರ ಭಾಗವಹಿಸಿದ್ದರು
ವರದಿ :ಪುನೀತ್ ಕಡಿದಾಳ್
9483811948
