ಮೂಡಿಗೆರೆ: ಶಾಸಕಿ ನಯನಾ ಮೋಟಮ್ಮ ವಿರುದ್ಧ ಮತ್ತೆ ಸೀನಿಯರ್ಸ್ ರೊಚ್ಚಿಗೆದ್ದಿದ್ದಾರೆ. ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡುವಿನಲ್ಲಿ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಯುವ ಶಾಸಕಿಯ ಕಾರ್ಯವೈಖರಿ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಷ್ಟೇ ಹೇಳಿದ್ರೂ ಹೋಬಳಿ ಅಧ್ಯಕ್ಷರು ಮೀಟಿಂಗನ್ನ ಕರೆಯಲ್ಲ, ಪಕ್ಷದ ಕಚೇರಿಗೆ ಶಾಸಕಿ ನಯನಾ ಮೋಟಮ್ಮ ಬಂದು ಒಂದೇ ಒಂದು ದಿನ ಸಭೆ ಮಾಡಿಲ್ಲ. ಶಾಸಕಿಯ ನಡೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗ್ತಿದೆ ಅಂತಾ ಮೂಡಿಗೆರೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿಗೆ ಕಾಂಗ್ರೆಸ್ ಹಿರಿಯ ನಾಯಕರಾದ ಜಯರಾಂ ಗೌಡ ಅವರನ್ನ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಕ್ಕೂ ಕೈ ನಾಯಕರು ಕಿಡಿಕಾರಿದರು.. ನಾವು ರಾಜಕೀಯ ಶುರು ಮಾಡಿದಾಗ ಅವರಿಗೆ ಐದಾರು ವರ್ಷವಾಗಿತ್ತು, ಕಾಂಗ್ರೆಸ್ ಪಕ್ಷಕ್ಕೆ ನಾವು ಸಲ್ಲಿಸಿದ ಸೇವೆಗೂ ಬೆಲೆ ಕೊಡದೇ ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ ಅಂತಾ ಶಾಸಕಿ ನಯನಾ ವಿರುದ್ಧ ಸಭೆಯಲ್ಲಿ ನಾಯಕರು ತಮ್ಮ ಅಸಮಾಧಾನ ಹೊರಹಾಕಿದ್ರು.ಅವರು ತಮ್ಮ ವರ್ತನೆಯನ್ನ ಬದಲಾಯಿಸಿಕೊಳ್ಳದಿದ್ರೆ ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಪಾಠ ಕಲಿಸ್ತಾರೆ ಅಂತಾಲೂ ಎಚ್ಚರಿಕೆ ಕೊಟ್ಟರು.
ಸಭೆಯಲ್ಲಿ ಬ್ಲಾö್ಯಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಜಿ ಸುರೇಂದ್ರಗೌಡ, ರಾಜ್ಯ ಕೆಪಿಸಿಸಿ ವಕ್ತಾರರಾದ ಹೆಚ್.ಹೆಚ್ ದೇವರಾಜ್, ಮಾಜಿ ಮಂತ್ರಿಗಳಾದ ಬಿ.ಬಿ ನಿಂಗಯ್ಯ, ಮಾಜಿ ಶಾಸಕರಾದ ಎಂ.ಪಿ ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ಎಂ.ಪಿ ಮನು, ಬಿ.ಎಸ್ ಜಯರಾಂ, ಹೇಮ್ ಶೇಖರ್, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಎಂ.ಎಸ್ ಅನಂತು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸಿ.ಕೆ ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ಹಾಲಪ್ಪಗೌಡ, ಅಕ್ರಂ ಹಾಜಿ, ಅಗ್ರಹಾರ ಮಹೇಶ್, ಕೆಂಜಿಗೆ ವಿನಯ್, ಸಂಪತ್ ಮುಗ್ರಹಳ್ಳಿ, ಭರತ್, ಡಿ.ಎಲ್ ಅಶೋಕ್, ಸಿರಿಲ್ ರೋಡಿಗ್ರಸ್, ಅಯ್ಯೂಬ್ ಚಕ್ಕಮಕ್ಕಿ, ಮರಗುಂದ ಪ್ರಸನ್ನ, ಉಮರ್ ಬಣಕಲ್ ಸೇರಿದಂತೆ ಹಲವು ಮುಖಂಡರು, ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
