Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ: ಗುಂಡಿ ಸಮೀಕ್ಷೆಗೆ ಬಂದ ಯಮಧರ್ಮ, ಚಿತ್ರಗುಪ್ತ: ಅಪಾಯ ಕಟ್ಟಿಟ್ಟಬುಟ್ಟಿ ಎಂದು ಅಣಕು!

ಮೂಡಿಗೆರೆ: ಗುಂಡಿ ಸಮೀಕ್ಷೆಗೆ ಬಂದ ಯಮಧರ್ಮ, ಚಿತ್ರಗುಪ್ತ: ಅಪಾಯ ಕಟ್ಟಿಟ್ಟಬುಟ್ಟಿ ಎಂದು ಅಣಕು!

ಮೂಡಿಗೆರೆ: ಹೊಂಡಗುಂಡಿಗಳಿಂದ ಕೂಡಿದ ರಸ್ತೆಗಳು ಹಾಗಾಗಿ ಗುಂಡಿ ಸಮೀಕ್ಷೆಗೆ ಬಂದ ಯಮಧರ್ಮ ಹಾಗೂ ಚಿತ್ರಗುಪ್ತ ಅಣಕ ಮಾಡಿದ್ದು ವೈರಲ್ ಆಗುತ್ತಿದೆ.

ಈ ರಸ್ತೆಯಲ್ಲಿ ಸಂಚರಿಸಿದರೆ ಅಪಾಯ ಖಚಿತ, ಯಮಧರ್ಮನೂ ಅಳತೆ ಮಾಡುವಷ್ಟು ಗುಂಡಿಗಳು ಬಿದ್ದಿವೆ ಎಂದು ಮೂಡಿಗೆರೆ ತಾಲೂಕಿನ ಸುತ್ತ ಮುತ್ತ ಜನಜಾಗೃತಿ ಕಾರ್ಯ ಸಂದರ್ಭದಲ್ಲಿ ವೇಷಧಾರಿಗಳು ಯಮಧರ್ಮ, ಚಿತ್ರಗುಪ್ತ ಪಾತ್ರಧಾರಿಯಲ್ಲಿ ನವೀನ್ ಹಾವಳಿ ಹಾಗೂ ರಮೇಶ್ ಯಾದವ್ ಅವರು ಗುಂಡಿಗಳ ಬಗ್ಗೆ ಅಣಕಿಸುವುದನ್ನು ನಾವಿಲ್ಲಿ ನೋಡಬಹುದು.

ನೋಡಲು ಹಾಸ್ಯಸ್ಪದ ಆದರೂ ಸಮೀಕ್ಷೆ ಕಹಿ ಸತ್ಯ ಪಾತ್ರದ ಮೂಲಕ ಜನಜಾಗೃತಿ ಮೂಡಿಸಿದ್ದು ವೇಷಧಾರಿಗಳು ಯಮಧರ್ಮ, ಚಿತ್ರಗುಪ್ತ ಪಾತ್ರಧಾರಿಯಲ್ಲಿ ನವೀನ್ ಹಾವಳಿ ಹಾಗೂ ರಮೇಶ್ ಯಾದವ್

ನೀಡುವಾಳೇ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಮೇಶ್ ಯಾದವ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸ್ಥಳೀಯ ಯುವಕರು ವೇಷತೊಟ್ಟು ರಸ್ತೆಯಲ್ಲಿ ಲಾಂಗ್‌ಜಂಪ್ ಮಾಡುವ ಮೂಲಕ ಅಪಾಯ ಕಟ್ಟಿಟ್ಟಬುತ್ತಿ ಎಂದು ಸಾರುವ ಅಣಕು ಪ್ರದರ್ಶನ ಮಾಡಿದರು. ವಿಶಿಷ್ಟವಾಗಿ ಪ್ರತಿಭಟಿಸಿದ ದೃಶ್ಯ ಜನರ ಗಮನ ಸೆಳೆಯಿತು. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!