Sunday, March 29, 2026
Homeಕ್ರೈಮ್ಶೃಂಗೇರಿ: ಶಾಸಕ ಟಿ.ಡಿ.ರಾಜೇಗೌಡ ಕುಟುಂಬ ವಿರುದ್ಧ ಆರೋಪ: ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟೀಕರಣ

ಶೃಂಗೇರಿ: ಶಾಸಕ ಟಿ.ಡಿ.ರಾಜೇಗೌಡ ಕುಟುಂಬ ವಿರುದ್ಧ ಆರೋಪ: ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟೀಕರಣ

ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ಮತ್ತು ಅವರ ಕುಟುಂಬದ ಮೇಲೆ ಬಂದಿರುವಅಕ್ರಮ ಆಸ್ತಿ ಗಳಿಸಿದ ಆರೋಪದ ಕುರಿತು ಶಾಸಕರು ತಮ್ಮ‌ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ

ಹೌದು ..ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು ಶಾಸಕರು ಅವರೇ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ಸಾರಂಶ ಹೀಗಿದೆ ನೋಡಿ:

  1. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನನ್ನ ಮೇಲೆ ನನ್ನ ಪತ್ನಿ ಹಾಗೂ ಮಗನ ಮೇಲೆ ಕೊಪ್ಪದ ಬಿಜೆಪಿಯ ನಾಯಕರಾದ ಹೆಚ್.ಕೆ.ದಿನೇಶ್ ಎಂಬುವವರು ಒಂದು ಖಾಸಗಿ ದೂರನ್ನು ದಾಖಲಿಸಿದ್ದಾರೆ.
  2. ಸದರಿಯವರು ದಾಖಲಿಸಿದ ದೂರಿನ ಆಧಾರದ ಮೇಲೆ ಮಾನ್ಯ ನ್ಯಾಯಲಯವು ಲೋಕಾಯುಕ್ತ ಎಸ್ ಪಿ ಅವರಿಗೆ ನಿರ್ದೇಶನವನ್ನು ನೀಡಿ ನನ್ನ ವಿರುದ್ದ ತನಿಖೆ ಕೈಗೊಳ್ಳಲು ಆದೇಶ ನೀಡಿರುತ್ತದೆ.
  3. ಮೇಲ್ಕಂಡ ಎಲ್ಲಾ ಸಂಗತಿಗಳ ಹಿಂದೆ ಅಂದರೆ ನನ್ನ ಮೇಲೆ ದಾಖಲಾಗಿರುವ ಎಲ್ಲಾ ದೂರಿಗೆ ಮಾಜಿ ಶಾಸಕರಾದ ಶ್ರೀ.ಡಿ.ಎನ್.ಜೀವರಾಜ್ ಅವರು ರಾಜಕೀಯ ದುರುದ್ದೇಶದಿಂದ ತನ್ನ ಹಿಂಬಾಲಕನಾದ ದೂರುದಾರನನ್ನು ಪ್ರಚೋದಿಸಿರುತ್ತಾರೆ.

4.ದೂರಿನಲ್ಲಿ ಆಪಾದಿಸಿದಂತೆ ನಾನು ನನ್ನ ಕುಟುಂಬ ಯಾವುದೇ ತಪ್ಪನ್ನು ಎಸಗಿರುವುದಿಲ್ಲ.

5.ಒಬ್ಬ ಜನಪ್ರಿನಿಧಿಯಾಗಿ ಜವಾಬ್ದಾರಿಯುತ ನಾಗರಿಕನಾಗಿ ಲೋಕಾಯುಕ್ತ ತನಿಖೆಗೆ ಪೂರ್ಣ ಸಹಕಾರ ನೀಡುವುದು ನನ್ನ ಕರ್ತವ್ಯವೆಂದು ತಿಳಿದಿರುತ್ತೇನೆ

6.ನನ್ನ ಕುಟುಂಬ ಹಾಗೂ ದಿವಂಗತ ಸಿದ್ದಾರ್ಥ ಹೆಗ್ಡೆ ಕುಟುಂಬದ ನಡುವಿನ ವ್ಯವಹಾರವನ್ನು ಶ್ರೀ.ಡಿ.ಎನ್.ಜೀವರಾಜ್ ಹಾಗೂ ಹೆಚ್.ಕೆ.ದಿನೇಶ್ ಅವರು ತಮ್ಮ ದ್ವೇಷ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿರುವುದು ನನ್ನ ಮನಸ್ಸಿಗೆ ನೋವುಂಟುಮಾಡಿದೆ..

7.ಲೋಕಾಯುಕ್ತ ಪೋಲೀಸರು ಕೈಗೊಳ್ಳುವ ಯಾವುದೇ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡಲು ಯಾವುದೇ ಸಂದರ್ಭದಲ್ಲಿಯೂ ಬದ್ದನಾಗಿರುತ್ತೇನೆ

8.ನನ್ನ ಮಗನ ಮೇಲೂ ಆಪಾದನೆ ಇರುವುದರಿಂದ ನನ್ನ ಮಗನನ್ನೂ ಸಹಿತ ತುರ್ತಾಗಿ ವಿದೇಶದಿಂದ ಹಿಂದಿರುಗಲು ಸೂಚಿಸಿರುತ್ತೇನೆ.

9.ಕರ್ನಾಟಕದ ಪತ್ರಿಕೆಯೊಂದರ ಸಹಯೋಗದಲ್ಲಿ ವಿದೇಶದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮಕ್ಕೂ ಸಹಿತ ನಾನು ಹಾಜರಾಗದೆ ತನಿಖೆಗೆ ಸಹಕರಿಸಲು ಕರ್ನಾಟಕದಲ್ಲಿಯೇ ಉಳಿದುಕೊಳ್ಳಲು ತೀರ್ಮಾನಿಸಿದ್ದೇನೆ..

10.ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಕಾಣಿಸಿದ ಜಮೀನು‌ ವ್ಯವಹಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ನನಗಿರುವ ಅಧಿಕಾರದ ದುರ್ಬಳಕೆ ಮಾಡಿರುವುದಿಲ್ಲ

11.ಪೂರ್ಣ ತನಿಖೆಯಾಗಿ ಸತ್ಯ ಹೊರಗೆ ಬರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!