Friday, August 14, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಶೈಕ್ಷಣಿಕ ಸಮೀಕ್ಷೆಗೆ ಗೈರು: 18 ಜನ ಶಿಕ್ಷಕರಿಗೆ ಕಾರಣ ಕೇಳಿ ಸಸ್ಪೆಂಡ್!

ಚಿಕ್ಕಮಗಳೂರು: ಶೈಕ್ಷಣಿಕ ಸಮೀಕ್ಷೆಗೆ ಗೈರು: 18 ಜನ ಶಿಕ್ಷಕರಿಗೆ ಕಾರಣ ಕೇಳಿ ಸಸ್ಪೆಂಡ್!

Telegram Group
Join Now

ಚಿಕ್ಕಮಗಳೂರು: ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ನೇಮಕಗೊಂಡಿರುವ ಶಿಕ್ಷಕರು ಗೈರು ಹಾಜರಾಗುತ್ತಿದ್ದು, ಸಮೀಕ್ಷೆಗೆ ಗೈರು ಹಾಜರಾಗುತ್ತಿರುವ 18 ಜನ ಶಿಕ್ಷಕರಿಗೆ ಕಾರಣ ಕೇಳಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜು ನೋಟಿಸ್ ನೀಡಿದ್ದಾರೆ.

ಸಮೀಕ್ಷೆ ಆರಂಭವಾದ ದಿನದಿಂದ ಭಾನುವಾರದವರೆಗೂ ಗೈರು ಹಾಜರಾಗಿರುವ 18 ಜನ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು ಜನತೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ತಹಶೀಲ್ದಾರ್ ಮುಂದೆ ದಾಖಲೆ ನೀಡುವಂತೆ ಸೂಚನೆ ನೀಡಲಾಗಿದೆ.

ಸಮೀಕ್ಷೆಗೆ 2882 ಶಿಕ್ಷಕರು ನೇಮಕಗೊಂಡಿದ್ದು, 18 ಜನ ಶಿಕ್ಷಕರು ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ 3,16,165 ಮನೆಗಳ ಪೈಕಿ 86,165 ಮನೆಗಳ ಸಮೀಕ್ಷೆ ಮುಕ್ತಾಯಗೊಂಡಿದೆ. ಕಳಸ, ಶೃಂಗೇರಿ ತಾಲೂಕಿನಲ್ಲಿ ಅತೀ ಕಡಿಮೆ ಸಮೀಕ್ಷೆ ನಡೆದಿದೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments