Saturday, October 3, 2026
Homeವಿದೇಶ180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್ ಮಚ್ಚಾರ್ ಗೆ1 ಕೋಟಿ ರೂ....

180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್ ಮಚ್ಚಾರ್ ಗೆ1 ಕೋಟಿ ರೂ. ಘೋಷಣೆ

Telegram Group
Join Now

ದೆಹಲಿ: ತನ್ನ ಜೀವದ ಹಂಗು ತೊರೆದು ಫ್ಲೈದುಬೈ ವಿಮಾನದಲ್ಲಿ 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ‘ಮ್ಯಾನ್‌ಕೈಂಡ್‌ ಫಾರ್ಮಾ’ ಕಂಪನಿಯು 1 ಕೋಟಿ ರೂ. ಘೋಷಣೆ ಮಾಡಿದೆ.

ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸವನ್ನು ಇಡೀ ವಿಶ್ವವೇ ಕೊಂಡಾಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶಾದ್ಯಂತದ ನಾಗರಿಕರು ಪ್ರಶಂಸೆ ಹಾಗೂ ಶುಭ ಹಾರೈಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆಯೇ ಕಂಪನಿಯು ಸ್ಮಿತ್‌ ಮಚ್ಚಾರ್‌ಗೆ 1 ಕೋಟಿ ಘೋಷಿಸಿದೆ.

ದುಬೈ-ಟೆಲ್ ಅವಿವ್ ನಡುವೆ ಸಂಚರಿಸುತ್ತಿದ್ದ ‘ಫ್ಲೈದುಬೈ’ ವಿಮಾನವನ್ನು ಪತನಗೊಳಿಸುವ ಪ್ರಯತ್ನ ನಡೆದಿತ್ತು. ಸಹ-ಪೈಲಟ್‌ನಿಂದ ಚಾಕು ಇರಿತಕ್ಕೆ ಒಳಗಾಗಿದ್ದರೂ ಮಚ್ಚಾರ್ ವಿಮಾನ ಸುರಕ್ಷಿತವಾಗಿ ಸೌದಿಯಲ್ಲಿ ಲ್ಯಾಂಡ್‌ ಆಗುವಂತೆ ನೋಡಿಕೊಂಡರು. ಅವರ ಅಸಾಧಾರಣ ಧೈರ್ಯ ಮತ್ತು ಮಾನವೀಯತೆಯನ್ನು ಗುರುತಿಸಿ, ಕೃತಜ್ಞತೆಯ ಸಂಕೇತವಾಗಿ 1 ಕೋಟಿ ರೂಪಾಯಿ ನೀಡಿ ಫಾರ್ಮಾ ಕಂಪನಿಯು ಗೌರವಿಸಿದೆ.

‘ನೀವು ರಕ್ಷಿಸಿದ ಜೀವಗಳ ಮೌಲ್ಯಕ್ಕಾಗಲಿ ಅಥವಾ ಲಕ್ಷಾಂತರ ಜನರಿಗೆ ನೀವು ನೀಡಿದ ಸ್ಫೂರ್ತಿಗಾಗಲಿ ಯಾವುದೇ ಹಣದ ಮೊತ್ತಕ್ಕೆ ಸಮವಾಗಲಾರದು. ನಿಮ್ಮ ಧೈರ್ಯ ಮತ್ತು ಮಾನವೀಯತೆಯ ಕುರಿತಾದ ನಮ್ಮ ಅಪಾರ ಗೌರವ, ಕೃತಜ್ಞತೆ ಮತ್ತು ಮೆಚ್ಚುಗೆಯ ಒಂದು ಸಣ್ಣ ಅಭಿವ್ಯಕ್ತಿ ಮಾತ್ರವೇ ಈ ಕೊಡುಗೆಯಾಗಿದೆʼ ಎಂದು ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಮಾನವು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಅಲ್-ಹಮಾಮಿ ವಿಮಾನದ ನಿಯಂತ್ರಣ ತಪ್ಪಿಸಿ, ಪ್ರತಿ ನಿಮಿಷಕ್ಕೆ 23,000 ಅಡಿಗಳಷ್ಟು ವೇಗದಲ್ಲಿ ಕೆಳಕ್ಕೆ ಧುಮುಕುವಂತೆ ಮಾಡಿದ್ದ. ಇದನ್ನು ತಡೆಯಲು ಬಂದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಹಮಾಮ್ ಚಾಕುವಿನಿಂದ ಇರಿದಿದ್ದ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಸ್ಮಿತ್, ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿದರು. ಒಳಗಡೆ ಬಂದ ಪ್ರಯಾಣಿಕ ಯಾನಿವ್ ಹಯೂನ್ ಹಾಗೂ ಸಿಬ್ಬಂದಿ ದಾಳಿಕೋರನನ್ನು ತಡೆದು ಬಂಧಿಸಿದರು. ಅಷ್ಟರಲ್ಲಿ ವಿಮಾನದಲ್ಲಿದ್ದ ದಂತ ವೈದ್ಯರೊಬ್ಬರು (Dentist) ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಯಾಪ್ಟನ್ ಸ್ಮಿತ್ ಅವರಿಗೆ ತುರ್ತು ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದರು. ಹಿಂಭಾಗದ ಸೀಟಿನಲ್ಲಿದ್ದ ಇಬ್ಬರು ರಿಲೀಫ್ ಪೈಲಟ್‌‌ಗಳು ತಕ್ಷಣ ಕಾಕ್‌ಪಿಟ್ ಪ್ರವೇಶಿಸಿ ವಿಮಾನವನ್ನು ಸೌದಿ ಅರೇಬಿಯಾದ ‘ತಬುಕ್’ (Tabuk) ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು. ಇದೀಗ ಈ ವಿಚಾರ ಎಲ್ಲ ಮೆಚ್ಚುಗೆಗೆ ಪಾತ್ರವಾಗಿದೆ. ನೆನ್ನೆ (ಅ.2)ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯಲ್ಲಿ “ನನಗೆ ಗಾಯಗಳಾಗಿದ್ದವು, ಆದರೆ 170ಕ್ಕೂ ಹೆಚ್ಚು ಅಮಾಯಕ ಪ್ರಯಾಣಿಕರನ್ನು ಸಾಲಾಗಿ ಸಾಯಲು ಬಿಡಲು ನನ್ನ ಮನಸ್ಸು ಬರಲಿಲ್ಲ” ಎಂದು ಕ್ಯಾಪ್ಟನ್ ಸ್ಮಿತ್ ಹೇಳಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!