Wednesday, November 4, 2026
Homeಕ್ರೈಮ್ಯೂಟ್ಯೂಬ್ ನೋಡಿ ನಕಲಿ ನೋಟು ಪ್ರಿಂಟಿಂಗ್: ಗ್ಯಾಂಗ್‌ನಿಂದ ₹6.78 ಕೋಟಿ ಮೌಲ್ಯದ ಫೇಕ್‌ ಕರೆನ್ಸಿ ಸೀಜ್!

ಯೂಟ್ಯೂಬ್ ನೋಡಿ ನಕಲಿ ನೋಟು ಪ್ರಿಂಟಿಂಗ್: ಗ್ಯಾಂಗ್‌ನಿಂದ ₹6.78 ಕೋಟಿ ಮೌಲ್ಯದ ಫೇಕ್‌ ಕರೆನ್ಸಿ ಸೀಜ್!

Telegram Group
Join Now

ಹೈದರಾಬಾದ್: ಯೂಟ್ಯೂಬ್ ವಿಡಿಯೋ ವೀಕ್ಷಿಸಿ ನಕಲಿ ನೋಟು ತಯಾರಿಸುವುದನ್ನು ಕಲಿತ ವ್ಯಕ್ತಿಯೊಬ್ಬನ ಅಕ್ರಮ ಜಾಲವನ್ನ ತೆಲಂಗಾಣ ಪೊಲೀಸರು ಭೇದಿಸಿದ್ದಾರೆ. ಈ ಕೇಸ್‌ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಹೆಡೆಮುರಿ ಕಟ್ಟಿ ಬರೋಬ್ಬರಿ ₹6.78 ಕೋಟಿ ಮೌಲ್ಯದ ನಕಲಿ ನೋಟು ವಶಕ್ಕೆ ಪಡೆದಿದ್ದಾರೆ.

ತೆಲಂಗಾಣದ ಕುಂಟ್ಲೂರು ವ್ಯಾಪ್ತಿಯಲ್ಲಿ ನಕಲಿ ನೋಟು ತಯಾರಿಸಲಾಗ್ತಿದೆ ಅಂತಾ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅದಕ್ಕೂ ಮುನ್ನ ರಾಮೋಜಿ ಫಿಲ್ಮ್ ಸಿಟಿ ಬಳಿ ವಾಹನ ತಪಾಸಣೆ ಮಾಡುವಾಗ ಪೊಲೀಸರಿಗೆ ಈ ನಕಲಿ ನೋಟು ಜಾಲದ ಸುಳಿವು ಸಿಕ್ಕಿತ್ತು. ಡೌಟ್‌ ಬಂದು ಕಾರು ತಡೆದು ಪರಿಶೀಲಿಸಿದಾಗ ₹8 ಲಕ್ಷ ಮೌಲ್ಯದ ನಕಲಿ ನೋಟುಗಳು ಪತ್ತೆ ಆಗಿದ್ವು. ಆ ಬಳಿಕ ತನಿಖೆಗೆ ಇಳಿದ ಪೊಲೀಸರಿಗೆ ಗೊತ್ತಾಗಿದ್ದೇ ಭಯಂಕರ ನಕಲಿ ನೋಟು ಜಾಲ.

ನಂತರ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಕುಂಟ್ಲೂರಿನ ಮತ್ತೊಂದು ಸ್ಥಳದಲ್ಲಿ ಸಂಗ್ರಹಿಸಿಟ್ಟಿದ್ದ ₹6.78 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಕರುಣಾಕರ್ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿನ ವಿಡಿಯೋಗಳನ್ನು ನೋಡಿ ನಕಲಿ ನೋಟು ತಯಾರಿಸುವ ವಿಧಾನವನ್ನು ಕಲಿತಿದ್ದಾನೆ. ಬಳಿಕ ಈ ಮಾಹಿತಿಯ ಆಧಾರದ ಮೇಲೆ ನಕಲಿ ನೋಟು ತಯಾರಿಕಾ ಘಟಕವೊಂದನ್ನು ಸ್ಥಾಪಿಸಿ, ನೋಟುಗಳನ್ನು ತಯಾರಿಸಿ ವಿತರಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಅಬ್ದುಲ್ಲಾಪುರಮೆಟ್ ಪೊಲೀಸರು ಹಾಗೂ ಷಾದ್‌ನಗರದ ವಿಶೇಷ ಕಾರ್ಯಾಚರಣೆ ತಂಡ (SOT) ಜಂಟಿಯಾಗಿ ನಡೆಸಿದೆ.

ಫ್ಯೂಚರ್ ಸಿಟಿ ಪೊಲೀಸ್ ಕಮಿಷನರ್ ತರುಣ್ ಜೋಶಿ ಅವರು ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಜಾಲದಲ್ಲಿ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ, ನಕಲಿ ನೋಟುಗಳನ್ನು ಎಲ್ಲೆಲ್ಲಿ ವಿತರಿಸಲಾಗಿದೆ ಮತ್ತು ಈ ಅಕ್ರಮ ಚಟುವಟಿಕೆ ಎಷ್ಟು ದಿನಗಳಿಂದ ನಡೆಯುತ್ತಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಯೂಟ್ಯೂಬ್ ವಿಡಿಯೋ ನೋಡಿ ನಕಲಿ ನೋಟು ತಯಾರಿಕೆಗೆ ಇಳಿದ ಆರೋಪಿಗಳು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ₹6.78 ಕೋಟಿ ಮೌಲ್ಯದ ನಕಲಿ ನೋಟುಗಳ ಭಾರೀ ಜಾಲ ಬಯಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!