Wednesday, November 4, 2026
Homeಜಿಲ್ಲಾಸುದ್ದಿಮಾಕೋಡು ಗ್ರಾಮಸ್ಥರ ಸ್ವಂತ ಹಣದಲ್ಲೇ ರಸ್ತೆ ಕಾಮಗಾರಿ: ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ!

ಮಾಕೋಡು ಗ್ರಾಮಸ್ಥರ ಸ್ವಂತ ಹಣದಲ್ಲೇ ರಸ್ತೆ ಕಾಮಗಾರಿ: ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ!

Telegram Group
Join Now

ಮೂಡಿಗೆರೆ: ಊರಿನ ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯೇ ಹೊರತು, ಗ್ರಾಮಸ್ಥರ ಮೇಲೆ ಹೊರೆಯಾಗಬೇಕಾದ ಕೆಲಸವಲ್ಲ. ಆದರೆ ಇಂದು ನಮ್ಮ ಊರಿನ ಗ್ರಾಮಸ್ಥರು ರಾಜಕಾರಣಿಗಳ ಸಹಾಯಕ್ಕಾಗಿ ಕಾಯದೆ, ತಮ್ಮ ಸ್ವಂತ ಕಷ್ಟದ ದುಡಿಮೆಯ ಹಣವನ್ನು ಒಟ್ಟುಗೂಡಿಸಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ.

ಇದು ಕೇವಲ ರಸ್ತೆ ನಿರ್ಮಾಣವಲ್ಲ ನಮ್ಮ ಊರಿನ ಜನರ ಒಗ್ಗಟ್ಟು, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂಕೇತವಾಗಿದೆ.ಚುನಾವಣೆಯ ಸಮಯದಲ್ಲಿ ಊರಿನ ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವವರು, ಇಂದು ಗ್ರಾಮಸ್ಥರು ತಮ್ಮ ಹಣದಿಂದ ರಸ್ತೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಾಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಆದರೆ ಜನಪ್ರತಿನಿಧಿಗಳಿಗೆ ಪ್ರಶ್ನೆ ಕೂಡ ಇಟ್ಟಿದ್ದಾರೆ.

1. ಜನಪ್ರತಿನಿಧಿಗಳಿದ್ದರೂ ಗ್ರಾಮಸ್ಥರು ತಮ್ಮ ಹಣದಲ್ಲಿ ರಸ್ತೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಏಕೆ?
2. ಅಭಿವೃದ್ಧಿಗಾಗಿ ಮೀಸಲಾದ ಅನುದಾನಗಳು ಗ್ರಾಮಗಳಿಗೆ ತಲುಪುತ್ತಿವೆಯೇ?
3. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರವೇ?

ನಾವು ಯಾರನ್ನೂ ಟೀಕಿಸುವ ಉದ್ದೇಶ ಹೊಂದಿಲ್ಲ. ಆದರೆ ನಮ್ಮ ಊರಿನ ಅಭಿವೃದ್ಧಿ ನಮ್ಮ ಹಕ್ಕು ಎಂಬುದನ್ನು ನೆನಪಿಸಲು ಬಯಸುತ್ತೇವೆ ಎಂದು ತಿಳಿಸಿದರು.

ನಮಗೆ ಬೇಕಿರುವುದು ಕೇವಲ ಚುನಾವಣೆಯ ಭರವಸೆಗಳಲ್ಲ; ನಮ್ಮ ಊರಿಗೆ ಉತ್ತಮ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಭೂತ ಸೌಕರ್ಯಗಳು ಬೇಕಾಗಿವೆ ಎಂದು ತಿಳಿಸಿದರು.

ಗ್ರಾಮಸ್ಥರ ಒಗ್ಗಟ್ಟಿಗೆ ನಮ್ಮ ಸಲಾಂ. ತಮ್ಮ ಊರಿನ ಅಭಿವೃದ್ಧಿಗಾಗಿ ಸ್ವಂತ ಹಣವನ್ನು ಖರ್ಚು ಮಾಡುತ್ತಿರುವ ಪ್ರತಿಯೊಬ್ಬ ಗ್ರಾಮಸ್ಥರಿಗೂ ಹೃತ್ಪೂರ್ವಕ ಅಭಿನಂದನೆಗಳು. ಊರಿನ ಅಭಿವೃದ್ಧಿ ನಮ್ಮ ಹಕ್ಕು, ಜನರ ಸೇವೆ ಜನಪ್ರತಿನಿಧಿಗಳ ಕರ್ತವ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!