ಜಯಪುರ: ಕೊಪ್ಪ ತಾಲೂಕಿನ ಹೋಬಳಿ ಕೇಂದ್ರವಾಗಿರುವ ಜಯಪುರ ಪಟ್ಟಣವೂ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು. ಪಟ್ಟಣದಲ್ಲಿ ವಾಹನಗಳ ದಟ್ಟಣೆಯೂ ಜಾಸ್ತಿಯಾಗಿದ್ದು ಇದರಿಂದ ತೊಂದರೆಯಾಗುತ್ತಿರುವುದರಿಂದ ನಾಳೆಯಿಂದ ಜಯಪುರ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಬೀಳಲಿದೆ.
ಜಯಪುರದ ಆಂಜನೇಯ ದೇವಸ್ಥಾನದಿಂದ ಶ್ರೀ ರಾಮ ಕಾಫಿ ಶಾಪಿನ ವರೆಗೆ ಮತ್ತು ಶೃಂಗೇರಿ ರಸ್ತೆಯಲ್ಲೂ ಸುಮಾರು ತೊಂಬತ್ತಕ್ಕೂ ಹೆಚ್ಚಿನ ನಾಮಫಲಕಗಳನ್ನು ಅಳವಡಿಸಿ ಫಲಕದಲ್ಲಿ ಇರುವ ಸೂಚನೆಯಂತೆ ವಾಹನಗಳನ್ನು ನಿಲ್ಲಿಸುವಂತೆ ಇಂದು ಕೂಡ ಮತ್ತೊಮ್ಮೆ ಎಲ್ಲರಿಗೂ ತಿಳಿಸಲಾಗಿದೆ.
ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ಒಂದು ಕಡೆ, ಹಾಗೂ ಮಂಗಳವಾರ, ಗುರುವಾರ, ಶನಿವಾರ ಒಂದೆಡೆ ನಿಲ್ಲಿಸುವಂತೆ ಫಲಕದಲ್ಲಿ ಸೂಚಿಸಲಾಗಿದೆ.
ಜಯಪುರದಲ್ಲಿ ವಾಹನಗಳ ದಟ್ಟಣೆ ಜಾಸ್ತಿಯಿದ್ದು ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿದ್ದು, ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಮತ್ತು ಪಟ್ಟಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಗುರಿಯಿಂದ ಪಾರ್ಕಿಂಗ್ ಅತ್ಯಗತ್ಯವಾಗಿದೆ. ಆದ್ದರಿಂದ ಎಲ್ಲರೂ ಸೂಚನ ಫಲಕದಲ್ಲಿ ಇರುವಂತೆ ವಾಹನಗಳನ್ನು ನಿಲ್ಲಿಸಿ ಸಹಕರಿಸಬೇಕೆಂದು ಜಯಪುರ ಠಾಣೆಯ ಪಿಎಸ್ಐ ರವೀಶ್ ಮಾಹಿತಿ ನೀಡಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
