Friday, October 30, 2026
Homeಜಿಲ್ಲಾಸುದ್ದಿವಿದ್ಯಾರ್ಥಿಗಳು ಭವಿಷ್ಯದ ಉತ್ತಮ ಪ್ರಜೆಯಾಗಬೇಕೆಂದರೆ ಗುಣಾತ್ಮಕ ಶಿಕ್ಷಣದೊಂದಿಗೆ ಕಾನೂನನ್ನು ಅರಿತುಕೊಳ್ಳಬೇಕು: ಸುರಕ್ಷಾ ಕೆ.ಕೆ

ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ಪ್ರಜೆಯಾಗಬೇಕೆಂದರೆ ಗುಣಾತ್ಮಕ ಶಿಕ್ಷಣದೊಂದಿಗೆ ಕಾನೂನನ್ನು ಅರಿತುಕೊಳ್ಳಬೇಕು: ಸುರಕ್ಷಾ ಕೆ.ಕೆ

Telegram Group
Join Now

ಮೂಡಿಗೆರೆ :ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ಪ್ರಜೆಯಾಗಬೇಕೆಂದರೆ ಅವರು ಗುಣಾತ್ಮಕ ಶಿಕ್ಷಣ ಪಡೆಯುವುದರೊಂದಿಗೆ ಕಾನೂನನ್ನು ಸರಿಯಾಗಿ ಅರಿತುಕೊಳ್ಳಬೇಕಾದ ಅಗತ್ಯವಿದೆ’ ಎಂದು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರೂ ಜೆಎಂಎಫ್‌ಸಿ ಶ್ರೀಮತಿ ಸುರಕ್ಷಾ ಕೆ.ಕೆ. ಅಭಿಪ್ರಾಯಪಟ್ಟರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಮೂಡಿಗೆರೆ ಸಂಯುಕ್ತಾಶ್ರಯದಲ್ಲಿ ‘ಸುರಕ್ಷಿತ ಬಾಲ್ಯ ಅಭಿಯಾನ’ ಅಂಗವಾಗಿ ಪಟ್ಟಣದ ಸರ್ಕಾರಿ ಬಾಲಿಕ ಪದವಿ ಪೂರ್ವ ಕಾಲೇಜು (ಫ್ರೌಢ ಶಾಲಾ ವಿಭಾಗ) ದಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು -ನೆರವು ಕಾರ್ಯಕ್ರಮವನ್ಮ್ನ ಗಿಡಗಳಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು.‘ಕಾನೂನಿನ ಮುಂದೆ ಎಲ್ಲರು ಸಮಾನರು, ಪ್ರತಿಯೊಬ್ಬರು ಕಾನೂನಿಗೆ ಬದ್ಧರಾಗಿರಬೇಕು. ಕಾನೂನನ್ನು ಮೀರಿ ಯಾವುದೇ ರೀತಿಯ ಕಾರ್ಯಗಳನ್ನು ಕೈಗೊಳ್ಳಬಾರದು. ನಮ್ಮಿಂದ ಯಾವುದೇ ರೀತಿಯ ಅಪರಾಧವಾಗಬಾರದು ಎಂದರೆ ಮೊದಲು ನಾವು ಪ್ರತಿಯೊಂದು ಕಾನೂನುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದೇ ಕಾರ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಕೈಗೊಂಡಾಗ ಮಾತ್ರ ಉತ್ತಮ ಹೆಸರು ಗಳಿಸಲು ಸಾಧ್ಯವಿದೆ’ ಎಂದು ತಿಳಿಸಿದರು.
‘ಜ್ಞಾನ ಬದುಕಿನ ದೊಡ್ಡ ಆಸ್ತಿಯಾಗಿದೆ. ಉತ್ತಮ ಜ್ಞಾನ ಸಂಪಾದನೆ ಮಾಡಿದವರಿಗೆ ಜಗತ್ತಿನಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಜ್ಞಾನಾರ್ಜನೆ ಮಾಡಿಕೊಳ್ಳಲು ಶ್ರಮಪಡಬೇಕು. ವಿದ್ಯಾರ್ಥಿಗಳ ಬಾಲ್ಯದ ದಿನಗಳು ಉತ್ತಮ ಅನುಭವದೊಂದಿಗೆ ಕಳೆಯಬೇಕೆ ಹೊರತು ಕೆಟ್ಟ ಅನುಭವಗಳಿಂದಲ್ಲ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೇ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಾಗಿದೆ. ಮಕ್ಕಳಿಗೆ ಯಾವುದೇ ಕೆಲಸಕ್ಕೆ ಕಳುಹಿಸಿಕೊಡದೆ ಅವರಿಗೆ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯವಾಗಿದೆ.

‘ಪ್ರಸ್ತುತ ಸಂದರ್ಭದಲ್ಲಿ ಮಕ್ಕಳನ್ನು ಸಂರಕ್ಷಣೆ ಮಾಡಬೇಕಾದವರಿಂದಲೇ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ.ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿ ವಕೀಲರಾದ ಶ್ರೀಮತಿ ಕೆ.ವಿಶಾಲ ನಾಗರಾಜ್ ಅವರು ‘ಪೊಕ್ಸೊ ಕಾಯ್ದೆ ಕೇವಲ ಹೆಣ್ಣು ಮಕ್ಕಳಿಗೆ ಅಷ್ಟೇ ಸೀಮಿತಿವಾಗಿಲ್ಲ. ಈ ಕಾಯ್ದೆಯಡಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಗಂಡು ಮಕ್ಕಳು ಸಹ ನ್ಯಾಯವನ್ನು ಪಡೆಯಬಹುದು. ಮಕ್ಕಳ ಮೇಲೆ ದೌರ್ಜನ್ಯ ನಡೆಯುವ ಕೃತ್ಯ ಕಂಡುಬಂದರೆ ಕೂಡಲೇ ೧೦೯೮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ತಿಳಿಸಿ ಪೋಕ್ಸೋ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪೂರ್ಣೇಶ್ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಶ್ರೀಮತಿ ಅರ್ಪಿತ ಕೆ.ಎಸ್., ಪ್ರಧಾನ ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ ರಾಜ್ ಅರಸ್ ಟಿ.ಜಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!