Saturday, October 31, 2026
Homeಜಿಲ್ಲಾಸುದ್ದಿಮಾದಕ ವಸ್ತು ಬಳಕೆಯಿಂದ ಆರೋಗ್ಯದ ಜೊತೆಗೆ ಕುಟುಂಬ ಕೂಡ ಸರ್ವನಾಶ: ಅನೀಸ್ ಕೌಸರಿ

ಮಾದಕ ವಸ್ತು ಬಳಕೆಯಿಂದ ಆರೋಗ್ಯದ ಜೊತೆಗೆ ಕುಟುಂಬ ಕೂಡ ಸರ್ವನಾಶ: ಅನೀಸ್ ಕೌಸರಿ

Telegram Group
Join Now

ಮೂಡಿಗೆರೆ: ಮಾದಕ ವಸ್ತು ಬಳಕೆಯಿಂದ ಆರೋಗ್ಯದ ಜೊತೆಗೆ ಕುಟುಂಬ ಕೂಡ ಸರ್ವನಾಶದ ಅಂಚಿಗೆ ತಲುಪುತ್ತದೆ. ಇಂತಹ ಅನಿಷ್ಟ ಪಿಡುಗನ್ನು ಸಮಾಜದಿಂದ ನಿರ್ಮೂಲನೆಗೊಳಿಸಲು ಯುವಜನರು ಸಂಘಟಿತರಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿದಾಗ ಬೇರು ಸಮೇತ ಕಿತ್ತೊಗೆಯಲು ಸಾಧ್ಯ ಎಂದು ಎಸ್, ಕೆ, ಎಸ್,ಎಸ್,ಎಫ್,ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಹೇಳಿದರು.

ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಅಂಗ ಸಂಸ್ಥೆಯಾದ ವಿಖಾಯ ಜಿಲ್ಲಾ ಸಮಿತಿಯಿಂದ ಪಟ್ಟಣದ ಲಯನ್ಸ್ ವೃತ್ತದಲ್ಲಿ ನಡೆದ ಮಾದಕ ವಸ್ತು ಹಾಗೂ ಡ್ರಗ್ಸ್ ವಿರುದ್ಧ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಮಾದಕ ವಸ್ತುಗಳ ಮಾರಾಟ ಮಾಡುವವರು ಮತ್ತು ಅದನ್ನು ಖರೀದಿಸಿ ಬಳಸುವವರನ್ನು ಕಂಡರೆ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾದಕ ವ್ಯಸನಕ್ಕೆ ಬಲಿಯಾಗದಂತೆ ಸಂಘ-ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ಜನಜಾಗೃತಿ ಕಾರ್ಯಕ್ರಮವನ್ನು ನಡೆಸಿದರೆ ಇಂತಹ ಅನಿಷ್ಟ ಪಿಡುಗನ್ನು ನಿವಾರಿಸಲು ಸಾಧ್ಯವಾಗುತ್ತದೆ. ಶಿಕ್ಷಣ ಸಂಸ್ಥೆ ಆವರಣ ಮತ್ತು ಜನನಿಬಿಡ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿ ನಡೆಯುತ್ತದೆ. ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಕಟ್ಟೆಚ್ಚರ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಾಲೇಜಿನ ಆವರಣದಲ್ಲಿ ಕಂಡು ಬಂದರೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ವಿಷಯ ತಿಳಿಸಿ ಅವರನ್ನು ಪೊಲೀಸರಿಗೆ ಒಪ್ಪಿಸಬೇಕು. ಮಾದಕ ವಸ್ತುಗಳನ್ನು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಾರಾಟ ಮಾಡಲು ಅವಕಾಶ ನೀಡಬಾರದು. ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಕರ್ನಾಟಕ ವಿಖಾಯ ಸಂಸ್ಥೆಯ ಚೇರ್ಮನ್ ಇಸ್ಮಾಯಿಲ್ ತಂಙಳ್ ಮಾತನಾಡಿ, ಮಾದಕ ವಸ್ತು ದೇಹಕ್ಕೆ ಮಾತ್ರವಲ್ಲ. ಅದನ್ನು ಬಳಸುವವರ ಕುಟುಂಬ ಮತ್ತು ಸಮಾಜಕ್ಕೆ ಮಾರಕವಾಗಿದೆ. ಅದರ ಚಟಕ್ಕೆ ಒಮ್ಮೆ ಬಲಿಯಾದರೆ ಮತ್ತೆ ಸಹಜ ಸ್ಥಿತಿಗೆ ಮರಳಲು ಸಾಧ್ಯವೆ ಇಲ್ಲ. ಮಾದಕ ವಸ್ತುಗಳನ್ನು ಬಳಸುವವರು ಅದರ ಒತ್ತಡಕ್ಕೆ ಒಳಗಾಗಿ ಜೀವನವನ್ನು ಸರ್ವನಾಶ ಮಾಡಿಕೊಳ್ಳುತ್ತಾರೆ. ದೇಶದಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ಇಂತಹ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಪ್ರತಿದಿನ ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆ ಇದರ ನಿಯಂತ್ರಣಕ್ಕೆ ಪ್ರತಿ ತಾಲೂಕಿನಲ್ಲಿ ಪ್ರತ್ಯೇಕ ಪೊಲೀಸ್ ತಂಡವನ್ನು ರಚಿಸಬೇಕು. ಮಾದಕ ವಸ್ತು ಸಂಪೂರ್ಣ ನಿರ್ಮೂಲನೆ ಯಾಗುವವರೆಗೂ ಪೋಲಿಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಿದರೆ ಒಂದೆ ತಿಂಗಳಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಸುವವರನ್ನು ಮಟ್ಟ ಹಾಕಬಹುದು ಎಂದು ತಿಳಿಸಿದರು.

ಆರಂಭದಲ್ಲಿ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮಾದಕ ವಸ್ತು ಮತ್ತು ಡ್ರಗ್ಸ್ ವಿರುದ್ಧ ಘೋಷಣೆ ಕೂಗಲಾಯಿತು.

ಖಲಂದರಿಯ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಸಿನಾನ್ ಫೈಝಿ ಪ್ರತಿಜ್ಞಾವಿಧಿ ಭೊಧಿಸಿದರು.
ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಅಧ್ಯಕ್ಷ ಸ್ವಾಧಿಕ್ ಅಝ್ಹರಿ, ಧರ್ಮಗುರುಗಳಾದ ಸಲೀಂ ಅರ್ಷದಿ, ಝೈದ್ ಫೈಝಿ, ಸೀನಾನ್ ಫೈಝಿ, ಮುಸ್ತಫಾ ಯಮಾನಿ, ಬದ್ರುದ್ದೀನ್ ದಾರಿಮಿ, ರಹೀಂ ಅಝ್ಹರಿ, ಯಾಕೂಬ್ ಫೈಝಿ, ಟಿ.ಸಿ.ಶಶಿಕುಮಾರ್, ಯಾಸೀರ್, ಶರೀಫ್ ಬಿಳಗುಳ, ನಿಯಾಜ್, ಅಜೀಜ್ ಅರಬಿ, ವಾಹಿದ್, ಅಲ್ತಾಫ್ ಬಿಳಗುಳ, ರಿಯಾಜ್ ಅಣಜೂರು, ಫಾರೂಕ್ ಬಣಕಲ್, ಎಂ.ಯು.ಶರೀಫ್, ಪಿ.ಕೆ.ಹಮೀದ್, ಹಬೀಬ್, ಉಸ್ಮಾನ್, ಅಜ್ಗರ್ ಚಕಮಕ್ಕಿ, ಪಿ.ಕೆ.ಹನೀಫ್, ಕರೀಂ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!