ಬಾಳೆಹೊನ್ನೂರು: 2025ರ ಅಂತರಾಷ್ಟ್ರೀಯ ಕಾಫಿ ದಿನದಂದು ಬಾಂಧವ್ಯಗಳನ್ನು ಬೆಳೆಸುತ್ತದೆ ಸಿಸಿಆರ್‌ಐ ಶತಮಾನಗಳ ಸಮರ್ಪಿತ ಸೇವೆಯ ವಾಕ್ ವಿತ್ ಕಾಫಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಅಕ್ಟೋಬರ್ 1ರಂದು ಬಾಳೆಹೊನ್ನೂರಿನ ಭದ್ರಾ ಕಾಫಿ ಶಾಪ್ ನಿಂದ ಜೇಸಿ ಸರ್ಕಲ್ ವರೆಗೆ ನಡೆಯಲಿದೆ.

ಹೌದು .. ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಎಂ ಕೆ ಸುಂದರೇಶ್ ಖಜಾಂಚಿ ಕೆಜಿಎಫ್ ಬಾಳೆಹೊನ್ನೂರು , ಉದ್ಘಾಟನೆಯನ್ನ ಶಾಸಕರಾದ ಟಿ ಡಿ ರಾಜೇಗೌಡ ಅವರು ಮಾಡಿಲಿದ್ದು ಹಾಗೆ ಮುಖ್ಯ ಅಥಿತಿಗಳಾಗಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯರಾದ ಆರತಿ ಕೃಷ್ಣ, ಉಪಸಭಾಪತಿ ಆದ ಎಂಕೆ. ಪ್ರಾಣೇಶ್, ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಎಚ್ ಬಿ ದಿನೇಶ್, ಮಾಜಿ ಶಾಸಕರಾದ ಡಿ.ಎನ್ ಜೀವರಾಜ್, ಮಾಜಿ ವಿದಾನ ಪರಿಷತ್ ಸದಸ್ಯರಾದ ಎಸ್ ವಿ ಮಂಜುನಾಥ್, ಸಿಸಿಆರ್‌ಐ ನಿರ್ದೇಶಕರಾದ ಸೆಂಥಿಲ್ ಕುಮಾರ್, ಕಾಫಿ ಮಂಡಳಿ ಸದಸ್ಯರಾದ ಮಹಾಬಲ, ದಿವಿನ್ ರಾಜ್, ಕೃಷ್ಣಾನಂದ, ಭಾಸ್ಕರ್ ಎನ್,ರವಿಚಂದ್ರ, ಕ್ರೀಡಾಪಟುವಾದ ಸ್ಟೀಫನ್, ಹಿರಿಯ ಕಾಫಿ ಬೆಳೆಗಾರರಾದ ರಾಜ್ ಗೋಪಾಲ್, ಡಾ. ವಿನೋದ್ ಆರೂರು, ಕೆಕೆ ವೆಂಕಟೇಶ್, ರೋಟರಿ ಕ್ಲಬ್ ನ ಅಧ್ಯಕ್ಷರಾದ ತಿಮ್ಮಯ್ಯ, ಜೇಸಿಐ ಬಾಳೆಹೊನ್ನೂರಿನ ಇಬ್ರಾಹಿಂ ಶಫಿ, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ವಿಕ್ರಂ ಭಾಗಿಯಾಗಲಿದ್ದಾರೆ.
ಹಾಗೆ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ಹಾಗೂ ಖಾಂಡ್ಯ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಎಲ್ಲಾ ಪಿಎಪಿಸಿಎಸ್ ಅಧ್ಯಕ್ಷರು ಮತ್ತು ಸದಸ್ಯರು ಭಾಗಿಯಾಗಲಿದ್ದಾರೆ.
