ಮೂಡಿಗೆರೆ: ದೇಶದೆಲ್ಲೆಡೆ ದಸರಾ ಸಂಭ್ರಮ ವಿಜೃಂಭಣೆಯಿಂದ ಸಾಗುತ್ತಿದ್ದು, ಜನರಲ್ಲಿ ಸಂತಸ ಸಂಭ್ರಮ ಮನೆ ಮಾಡಿದ್ದು ಬುಧವಾರ ಆಯುಧ ಪೂಜೆ ಹಿನ್ನೆಲೆಯಲ್ಲಿ ಮೂಡಿಗೆರೆಯಲ್ಲಿ ಸಾರ್ವಜನಿಕರ ಹಣ್ಣು, ಹೂವು ಖರೀದಿ ಭರಾಟೆ ಜೋರಾಗಿದೆ.
ಹೌದು .. ಮೂಡಿಗೆರೆ ಜನರು ಆಯುಧ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹಣ್ಣು, ಹೂವು ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಅಲ್ಲಿ ಜನಜಂಗುಳಿಯಾಗಿದ್ದು ಹೂವಿನ ಅಂಗಡಿಗಳಲ್ಲಿ ಕಾಲಿಡಲು ಸಾಧ್ಯವಾಗುತ್ತಿಲ್ಲ ಆ ರೀತಿ ಜನರು ಹೂವಿನ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ.
ಯಾವುದೇ ಹಬ್ಬ ಬಂತೆಂದರೆ ಸಾಕು, ವಿವಿಧ ಬಗೆಯ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನರು ಮಾರ್ಕೆಟ್‌ಗೆ ಮುಗಿಬೀಳುತ್ತಾರೆ. ಅದೇ ರೀತಿ ಇಂದು ಮೂಡಿಗೆರೆಯಲ್ಲಿ ಹೂ ಖರೀದಿ ಮಾಡಲು ಜನವೋ ಜನಜಂಗುಳಿ ಸೇರಿದ್ದು ಮಾತ್ರ ನೋಡಲು ಜಾತ್ರೆ ತರ ಕಾಣುತ್ತಿತ್ತು.
