Sunday, November 22, 2026
Homeಜಿಲ್ಲಾಸುದ್ದಿಬೇಲೂರಿಂದ ಮೂಡಿಗೆರೆಗೆ ಆನೆ ಹಿಂಡು ಎಂಟ್ರಿ: ಕಾಫಿ ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ

ಬೇಲೂರಿಂದ ಮೂಡಿಗೆರೆಗೆ ಆನೆ ಹಿಂಡು ಎಂಟ್ರಿ: ಕಾಫಿ ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ

Telegram Group
Join Now

ಮೂಡಿಗೆರೆ: ಹಾಸನದ ಬೇಲೂರು ಭಾಗದಿಂದ ಚಿಕ್ಕಮಗಳೂರಿನ ಮೂಡಿಗೆರೆಯ ಗೋಣಿಬೀಡು ವ್ಯಾಪ್ತಿಗೆ ಅರಣ್ಯ ಇಲಾಖೆ ಕಾಡಾನೆಗಳನ್ನ ಓಡಿಸಿದೆ. ವಿರೋಧದ ಮಧ್ಯೆಯೂ ಮಲೆನಾಡಿಗೆ ಹಿಂಡನ್ನ ಡ್ರೈವ್‌ ಮಾಡಲಾಗಿದ್ದು, ಕಾರ್‌ಬೈಲ್ ಬಳಿ 2 ಗುಂಪಾಗಿ ಆನೆಗಳು ಚದುರಿವೆ.

ವಾಟೆಗಂಡಿ, ಚಟ್ನಳ್ಳಿ, ಹುಲಿಹಡ್ಲು, ಕಲ್ಲುಗುಡ್ಡ, ಕಮ್ಮಾರಗೋಡು ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಸಂಚಾರ ಸಾಗಿದ್ದು, ಕಾಫಿ ಕೊಯ್ಲಿನ ಸಮಯದಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಕಾಫಿ ತೋಟಗಳಿಗೆ ಕಾರ್ಮಿಕರು ಸದ್ಯಕ್ಕೆ ತೆರಳದಂತೆ ಅರಣ್ಯ ಇಲಾಖೆ ಸೂಚಿಸಿದೆ.

ಜನರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಮನವಿ ಮಾಡಿದೆ. ಮಲೆನಾಡು ಭಾಗಕ್ಕೆ ಆನೆಗಳ ಸ್ಥಳಾಂತರ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!