ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿ-ಜನಗಣತಿ ಸಮೀಕ್ಷೆ ಒಂದು ಕಾಟಾಚಾರದ ಸಮೀಕ್ಷೆಯಾಗಿದೆ ಹಾಗೆ ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟ ಆಡುತ್ತಿದ್ದೀರಿ ಎಂದು ಎಂಎಲ್ಸಿ ಭೋಜೇಗೌಡರ ಅವರು ಗರಂ ಆಗಿದ್ದಾರೆ.
ಹೌದು .. ಅಧಿಕಾರಿಗಳು ಶಿಕ್ಷಕರ ಮೇಲೆ ವಿನಾಕಾರಣ ಒತ್ತಡ ಹೇರುತ್ತಿದ್ದಾರೆ ಸಮೀಕ್ಷೆಗೆ ಕೇವಲ ಶಿಕ್ಷಕರ ಬಳಕೆ ಮಾತ್ರ ಯಾಕೆ ಬೇರೆ ಇಲಾಖೆಯ ಸಿಬ್ಬಂದಿಗಳನ್ನ ಯಾಕೆ ಬಳಸಿಕೊಳ್ಳುತ್ತಿಲ್ಲ ಇನ್ನೂ ನಾಲ್ಕೈದು ದಿನ ಬಿಟ್ರೆ ಶಾಲೆಗಳು ಆರಂಭವಾಗುತ್ತದೆ ಆಗ ಯಾರನ್ನ ಸಮೀಕ್ಷೆಗೆ ಬಳಸಿಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದರು.
ಹಾಗೆ ದಕ್ಷಿಣ ಕನ್ನಡ ಎಡಿಸಿ ವಿರುದ್ಧ ಗರಂ ಆದ ಎಂಎಲ್ಸಿ ಭೋಜೇಗೌಡ ಅವರು, ನಾನು ಈ ಹಿಂದೆನೇ ಹೇಳಿದ್ದೇ ಶಿಕ್ಷಕರು ಮೇಲೆ ಒತ್ತಡ ಹೇರಬೇಡಿ ಆದರೂ ದಕ್ಷಿಣ ಕನ್ನಡ ಎಡಿಸಿ ಶಿಕ್ಷಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಎಡಿಸಿ ರಾಜು ವಿರುದ್ಧ ಭೋಜೇಗೌಡ ಆಕ್ರೋಶ ಹೊರಹಾಕಿದರು.
ಸುಖಾಸುಮ್ಮನೆ ಶಿಕ್ಷಕರು, ಬಿಇಒ ಮೇಲೆ ಕ್ರಮ ಕೈಗೊಂಡಿದ್ದಾರೆ ಕೂಡಲೇ ಎಡಿಸಿ ಮೇಲೆ ಕ್ರಮ ಆಗಬೇಕೆಂದು
ಪಬ್ಲಿಕ್ ಇಂಪ್ಯಾಕ್ಟ್ ಮೂಲಕ ಭೋಜೇಗೌಡ ಅವರು ಒತ್ತಾಯ ಮಾಡಿದರು.
