ಮೂಡಿಗೆರೆ: ಬಡವರ ಪಾಲಿನ ಆಶಾಕಿರಣ ವೃದ್ಧಾಪ್ಯ. ವಿಧವಾ ಪಿಂಚಣಿ. ಸೇರಿದಂತೆ ಬಹುತೇಕ ಯೋಜನೆಗಳನ್ನು ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ ರಾಜ್ಯ ಸರ್ಕಾರ. ನಿಲ್ಲಿಸುವ ಮೂಲಕ ಜನತೆಗೆ ದ್ರೋಹ ಎಸಗಿದೆ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂಕೆ ಪ್ರಾಣೇಶ್ ತಿಳಿಸಿದರು.
ಅವರು ಇಲ್ಲಿನ ಪಂಚವಟಿ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿ. ರಾಜ್ಯ ಸರ್ಕಾರ ಎಲ್ಲಾ ಹಂತದಲ್ಲೂ ವಿಫಲವಾಗಿದೆ ಕಷ್ಟದಿಂದ ಬದುಕು ಸಾಗಿಸುತ್ತಿರುವ ವಯಸ್ಕರ ವಿಧವೆಯರು ಸೇರಿದಂತೆ ಈ ಹಿಂದೆ ಬಿಜೆಪಿ ಸರ್ಕಾರ ಕಡುಬಡವರಿಗೆ ನೀಡುತ್ತಿದ್ದ ಹಲೋ ಯೋಜನೆಗಳನ್ನು ವ ಕಳೆದ ನಾಲ್ಕು ತಿಂಗಳಿಂದ ಈಗಿನ ರಾಜ್ಯ ಸರ್ಕಾರ ನೀಡುತ್ತಿಲ್ಲ. ಇದರ ಫಲಾನುಭವಿಗಳು ದಿನಾಲು ತಾಲೂಕು ಕಚೇರಿ ಜನಪ್ರತಿನಿಧಿಗಳ ಮನೆಗೆ ಅಲೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣ ನೀಡಿ ಹಲೋ ತಿಂಗಳಾಗಿದೆ. ಗೃಹ ಜ್ಯೋತಿ ಪರಿಷ್ಕರಣೆ ಹೆಸರಲ್ಲಿ ಅದನ್ನು ನಿಲ್ಲಿಸುವ ಹೊನ್ನಾರ ನಡೆಯುತ್ತಿದೆ. ಮನೆ ವ್ಯಾಪಾರ ಸ್ಥಳದ ವಿದ್ಯುತ್ ಬಿಲ್ ಹೆಚ್ಚಳ ಮಾಡಲಾಗಿದೆ. ರಾಜ್ಯ ಬರ ತಾಂಡವಾಡುತ್ತಿದ್ದು ರೈತರಿಗೆ ಪರಿಹಾರ ನೀಡುವ ಮಾತೆ ಆಡುತ್ತಿಲ್ಲ. ಕಾಪಿ ಅಡಿಕೆ ಕಾಳು ಮೆಣಸು ಬೆಳೆಗಾರರು ತಮ್ಮ ಕೃಷಿ ಬೆಳೆಗೆ ಕೋಳೆ ರೋಗದಿಂದ ಬಳಲಿದ್ದಾರೆ. ಪರಿಹಾರ ಮರಿಚಿಕೆಯಾಗಿದೆ. 10 ಹೆಚ್ ಪಿ ಒಳಗಿನ ವಿದ್ಯುತ್ ತ ಮೋಟಾರ್ಗಳಿಗೆ ನಮ್ಮ ಸರ್ಕಾರ ಉಚಿತ ವಿದ್ಯುತ್ ಘೋಷಣೆ ಮಾಡಿತ್ತು. ಈ ಸರ್ಕಾರ ರೃೈತರಿಂದಲು ವಸುಲಿಗೆ ಇಳಿದಿದೆ. ರಸ್ತೆಗಳು ಗುಂಡಿ ಬಿದ್ದಿವೆ. ಕೇವಲ ಬೆಲೆ ಏರಿಕೆ ಮಾತ್ರ ಕಾಂಗ್ರೆಸ್ ಕೊಡುಗೆಯಾಗಿದೆ. ಜನಸಾಮಾನ್ಯರು ದಿಕ್ಕೆಟ್ಟು ಹೋಗಿದ್ದಾರೆ. ಖಜಾನೆ ಬರಿದಾಗಿದ್ದು. ಮುಂದಿನ ದಿನಗಳಲ್ಲಿ ರಾಜ್ಯ ಇನ್ನು ಗೋರ ಸ್ಥಿತಿ ಎದುರಿಸುವ ಹಂತ ತಲುಪಿದೆ. ಆರ್ಥಿಕ ಸ್ಥಿತಿ ಸರಿ ಮಾಡುವ ಬದಲು ನಾಗೇಂದ್ರ ಸೇರಿದಂತೆ ಹಲವು ಭ್ರಷ್ಟರಿಗೆ ಸಚಿವ ಸ್ಥಾನ ನೀಡಿ ರಾಜ್ಯವನ್ನೇ ಕೊಳ್ಳೆ ಹೊಡೆಯುವ ಯೋಜನೆಯನ್ನು ಹಾಕಿಕೊಂಡಿದೆ ಎಂದರು.
ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮಾತನಾಡಿ, ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಮತ್ತು ಈ ಹಿಂದೆ ಬಿಜೆಪಿ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿದೆ ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದೆ ತಾನೇ ಕೊಟ್ಟ ಭಾಗ್ಯಗಳನ್ನು ಪೂರೈಸಲು ಆಗುತ್ತಿಲ್ಲ ಬಡವರು ಕಡುಕಷ್ಟದಲ್ಲಿ ಇದ್ದಾರೆ ಸರ್ಕಾರದ ವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ತಂತ್ರಸ್ಥರಿಗೆ ನ್ಯಾಯ ಒದಗಿಸುವ ಸಲುವಾಗಿ ಆಗಸ್ಟ್ 24ರಂದು ಮೂಡಿಗೆರೆಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ ಆರ್ ಜಗದೀಶ್. ರಘು ಜನ್ನಾಪುರ. ಕಲ್ಲೇಶ್ ಮಾಕೋನಹಳ್ಳಿ. ಮನೋಜ್ ಹಳೆಕೋಟೆ. ಕೆಂಜಿಗೆ ಕೇಶವ್ ದೀಪಕ್ ದೊಡ್ಡಯ್ಯ. ಪಂಚಾಕ್ಷರಿ ಹಾಲೂರು. ಭರತ್ ಬಾಳೂರು . ವಿಭಾ ಸುಷ್ಮಾ. ಪ್ರಶಾಂತ್ ಬಿಳಗುಳ. ನಯನತಳವಾರ. ಧನಿಕ ಕೊಡದಿಣ್ಣೆ. ರಘುಪಟ್ಟದೂರು. ಸಚಿನ್ ಬಾನಹಳ್ಳಿ ಸಂದೀಪ್ ಕೆಲ್ಲೂರು ಮತ್ತಿತರರಿದ್ದರು.
