ಮೂಡಿಗೆರೆ: ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ರವಿ ಕುನ್ನಳ್ಳಿ ಅವರನ್ನು ನೇಮಕ ಮಾಡಲಾಗಿದೆ
ಪ್ರಸ್ತುತ ಸಂಘಟನ ಸೃಜನ್ ಅಭಿಯಾನ ನಡೆಯುತ್ತಿರುವ ಹಿನ್ನಲೆ ರವಿ ಕುನ್ನಳ್ಳಿ ಅವರಿಗೆ ನೇಮಕಾತಿ ಪತ್ರವನ್ನು ಶುಕ್ರವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಅವರ ಸೂಚನೇಯಂತೆ ಜನಪ್ರಿಯ ಶಾಸಕಿ ಶ್ರೀಮತಿ ನಯನಾ ಮೋಟಮ್ಮ ಹಸ್ತಾಂತರಿಸಿದರು. ‘ತಕ್ಷಣವೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರ ಜೊತೆ ಸೇರಿ ಪಕ್ಷ ಬಲವರ್ಧನೆ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿಗೆ ಪ್ರತಿಕ್ರಿಯಿಸಿದ ರವಿ ಕುನ್ನಳ್ಳಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದ್ದು ಪಕ್ಷ ನಿಷ್ಠೆಗೆ ಸಿಕ್ಕಜವಾಬ್ದಾರಿಯಾಗಿದೆ.ರಾಜಕೀಯ ಗುರುಗಳಾದ ಅಮ್ಮ ಮೋಟಮ್ಮ ಅವರ ಆಶೀರ್ವಾದ ನನ್ನ ಮೇಲಿದೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.ನಾಯಕಿ ನಯನಾ ಮೋಟಮ್ಮ ಅವರ ಕೆಲಸ ಕಾರ್ಯಗಳಲ್ಲಿ ಓರ್ವ ಕಾರ್ಯಕರ್ತನ್ನಾಗಿ ಜೊತೆಗಿದ್ದು ಬೇಬಲಿಸುವುದಾಗಿ ಅವರು ತಿಳಿಸಿದರು
