Wednesday, March 25, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: KSRTC ಬಸ್‌‌ ಡಿಪೋಗೆ ಸಿ.ಟಿ. ರವಿ ಭೇಟಿ, ಬಸ್ʼಗಳ ನಿರ್ವಹಣಾ ಕಾರ್ಯ ಕುರಿತು ಪರಿಶೀಲನೆ!

ಚಿಕ್ಕಮಗಳೂರು: KSRTC ಬಸ್‌‌ ಡಿಪೋಗೆ ಸಿ.ಟಿ. ರವಿ ಭೇಟಿ, ಬಸ್ʼಗಳ ನಿರ್ವಹಣಾ ಕಾರ್ಯ ಕುರಿತು ಪರಿಶೀಲನೆ!

ಚಿಕ್ಕಮಗಳೂರು: ಜಿಲ್ಲೆಯ KSRTC ಬಸ್ ಡಿಪೋಗೆ ವಿದಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರ ಭೇಟಿ ನೀಡಿ ಬಸ್‌ ಗಳ ಸ್ಥಿತಿ ಗತಿ, ಮೆಕಾನಿಕ್‌ ಸರ್ವಿಸ್‌ ಹಾಗೂ ನಿರ್ವಹಣಾ ಕಾರ್ಯಗಳ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಹೌದು … ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಕೆಲವು ಹಳೆಯದಾಗಿರುವ ಹಿನ್ನೆಲೆ, ದಿನನಿತ್ಯ ಕೆಟ್ಟು ನಿಲ್ಲುತ್ತಿರುವುದು, ತಾಂತ್ರಿಕ ತೊಂದರೆಗೆ ಸಿಲುಕಿ ಅಪಘಾತಕ್ಕೆ ತುತ್ತಾಗುತ್ತಿರುವುದು ಹಾಗೂ ದಿನಕ್ಕೆ ಒಂದೇ ಬಸ್ಸು ಸಂಚರಿಸುವ ಮಾರ್ಗದ ಬಸ್ಸನ್ನು ಆಗಾಗ ರದ್ದುಗೊಳಿಸುತ್ತಿರುವ ಕಾರಣ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಸರ್ಕಾರಿ ಬಸ್ಸುಗಳನ್ನೇ ಅವಲಂಬಿಸಿರುವ ಗ್ರಾಮೀಣ ಭಾಗದ ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿರುವುದರ ಬಗ್ಗೆ ಸಾರ್ವಜನಿಕರು ಸಿ.ಟಿ.ರವಿ ಅವರ ಗಮನಕ್ಕೆ ತಂದಿದ್ದರು

ಈ ಕುರಿತು ಸಮಸ್ಯೆಗಳನ್ನು ಬಗೆಹರಿಸುವಂತೆ ಕಛೇರಿಗೆ ಸಾಕಷ್ಟು ಮನವಿ ಬಂದಿರುವ ಹಿನ್ನೆಲೆ, ಇಂದು ಚಿಕ್ಕಮಗಳೂರು ಬಸ್ ಡಿಪೋಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಬಸ್ ಸಂಬಂಧಿತ ವೇಳಾಪಟ್ಟಿಗಳ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಯಾಣಿಕರ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿ ಬಳಿಕ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿದರು.

ಹಾಗೆ ಶಕ್ತಿ ಯೋಜನೆ ಹೆಸರಿನಲ್ಲಿ ಸಂಚರಿಸುತ್ತಿರುವ ಬಸ್ಸುಗಳು ಸಾಕಷ್ಟು ಸಮಸ್ಯೆಗಳಿಂದ ರಸ್ತೆ ಮದ್ಯದಲ್ಲಿಯೇ ನಿಶಕ್ತಿಗೊಳಗಾದಂತೆ ನಿಲ್ಲುತ್ತಿವೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ರಾಜ್ಯ ಸಾರಿಗೆ ಸಚಿವರು ಗಮನಹರಿಸಬೇಕು. ಇಲಾಖೆಗೆ ಪೂರಕ, ತಾಂತ್ರಿಕ ವ್ಯವಸ್ಥೆ ಮತ್ತು ಸಾಮರ್ಥ್ಯವುಳ್ಳ ಬಸ್ಸುಗಳನ್ನು ಒದಗಿಸಿ, ಅನುಕೂಲ ಕಲ್ಪಿಸಬೇಕಾಗಿರುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!