Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ : ಬಿಜೆಪಿ ಕಾರ್ಯಕರ್ತರ ಮೇಲೆ FIR, ಇದೊಂದು ಆಘಾತಕಾರಿ ಬೆಳವಣಿಗೆ : ಅಭಿಷೇಕ್ ಜಾವಳಿ

ಮೂಡಿಗೆರೆ : ಬಿಜೆಪಿ ಕಾರ್ಯಕರ್ತರ ಮೇಲೆ FIR, ಇದೊಂದು ಆಘಾತಕಾರಿ ಬೆಳವಣಿಗೆ : ಅಭಿಷೇಕ್ ಜಾವಳಿ

Telegram Group
Join Now

ಮೂಡಿಗೆರೆ: ಚಿಕ್ಕಮಗಳೂರು ನಗರದ ವಿಜಯಪುರದ ರಸ್ತೆಯಲ್ಲಿ ಸಾಗುತ್ತಿದ್ದ ಗೋವಿನ ಬಾಲಕ್ಕೆ ಮತೀಯ ವ್ಯಕ್ತಿಗಳು ಸ್ಪ್ರೇ ಸಿಂಪಡಿಸಿ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದು, ಇದನ್ನು ಪ್ರಶ್ನಿಸಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ಸಂಘಟನೆಯ ಹಲವರ ಮೇಲೆ ಕೇಸು ದಾಖಲಿಸಿರುವುದು ಆಘಾತಕಾರಿ ಎಂದು ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಜಾವಳಿ ತಿಳಿಸಿದ್ದಾರೆ.

ಹಾಗೆ ವಿಕೃತಿ ಮೆರೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಅದನ್ನು ಬಿಟ್ಟು ಪ್ರಶ್ನಿಸಿದವರ ಮೇಲೆ ಪ್ರಕರಣ ದಾಖಲಿಸಿರುವುದು ಕೆಲ ಅನುಮಾನಗಳಿಗೆ ಕಾರಣವಾಗಿದೆ ಎಂದರು

ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ಸಂಘಟನೆಯ ಕಾರ್ಯಕರ್ತರ ಮೇಲೆ ದಾಖಲಿಸಿರುವ ಕೇಸನ್ನು ವಾಪಸ್ಸು ಪಡೆದುಕೊಳ್ಳದಿದ್ದರೆ, ಇದೇ ರೀತಿ ಪದೇ ಪದೇ ವಿಕೃತಿ ಮೆರೆದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments