ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಾರದಹಳ್ಳಿ ಶಾಖೆ ಲಾಭಧಾಯಕವಾಗಿದೆ ಸಂಘವು 2025-26ನೇ ಸಾಲಿನಲ್ಲಿ ರೂ ನಿವ್ವಳ ಲಾಭ 17.5 ಲಕ್ಷ ಗಳಿಸಿದೆ ಎಂದು ಸಂಘದ ಅಧ್ಯಕ್ಷ ರಂಜಿತ್ ದಾರದಹಳ್ಳಿ ಹೇಳಿದರು.ನಿಮ್ಮೆಲ್ಲರ ಕಾರ್ಯದ ನಡುವೆ ಕೆಲಸ ಮಾಡಲು ಹರ್ಷ ವಾಗುತ್ತದೆ,ರೈತರ ಹಿತದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗಾಗಿ 2 ಕೋಟಿ ರೂಪಾಯಿ ಸಾಲಕ್ಕೆ ಜಿಲ್ಲಾ ಸಹಕಾರ ಬ್ಯಾಂಕಿಗೆ ಬೇಡಿಕೆ ಇಟ್ಟಿದ್ದು ಮಂಜೂರು ಆದಲ್ಲಿ ರೈತರಿಗೆ ಸಾಲ ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದರು
ಅವರು ಶುಕ್ರವಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಸಂಘದ ಅಭಿವೃದ್ಧಿಗೆ ಇನ್ನಷ್ಟು ಹೊಸ ಯೋಜನೆಗಳನ್ನು ರೂಪಿಸಬೇಕೆಂಬ ಆಶಯವಿದೆ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಗ್ರಾಮಸ್ಥರ ಸಹಕಾರ ಅತ್ಯವಶ್ಯಕ ಎಂದರು
ಈ ಸಂದರ್ಭದಲ್ಲಿ ಸಾಧನೆಗೈದ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಧಾರ್ಮಿಕ ದಿನೇಶ್ ,ನಿರ್ದೇಶಕರುಗಳಾದ ರಂಜನ್ ಅಜಿತ್ ಕುಮಾರ್, ವಿಕ್ರಂ ದಾರದಹಳ್ಳಿ,ರವಿ ಹಾಲೂರು,ದೀಪಕ್ ಕಡಿದಾಳು, ಸಿದ್ದೇಶ್ ಕೆಸವಳಲು, ರಂಜಿತ್ ಕೆಸವಳಲು,ಅನಂದಚಾರಿ, ಸೀನಾ,ಸುನೀತಾ,ಅರುಣಕ್ಷಮ್ಮ ಡಿ, ಸಿ, ಸಿ, ಬ್ಯಾಂಕ್ ಮೇಲ್ವಿಚಾರಕ ನಿತೀನ್ ಪಟೇಲ್,,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಪತ್ ಕುಮಾರ್,ಸಿಬ್ಬಂದಿಗಳಾದ ರಾಮಚಂದ್ರ,ಸ್ಮಿತಾ, ಶ್ರೀಮಂತ್,ವಿಗ್ನೇಶ್, ಆನಂದ್,ಅಶ್ವಥ್ ಸೇರಿದಂತೆ ದಾರದಹಳ್ಳಿ ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು
