Wednesday, November 11, 2026
Homeಜಿಲ್ಲಾಸುದ್ದಿರೇಷನ್‌ ಕಾರ್ಡ್‌ದಾರರಿಗೆ ಗುಡ್‌ ನ್ಯೂಸ್‌: ಇ-ಕೆವೈಸಿ ಗಡುವು ನವೆಂಬರ್ 30 ರವರೆಗೆ ವಿಸ್ತರಣೆ!

ರೇಷನ್‌ ಕಾರ್ಡ್‌ದಾರರಿಗೆ ಗುಡ್‌ ನ್ಯೂಸ್‌: ಇ-ಕೆವೈಸಿ ಗಡುವು ನವೆಂಬರ್ 30 ರವರೆಗೆ ವಿಸ್ತರಣೆ!

Telegram Group
Join Now

ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಇ-ಕೆವೈಸಿಗೆ ನೀಡಿದ್ದ ಗಡುವನ್ನು ಸರ್ಕಾರ ವಿಸ್ತರಿಸಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ನವೆಂಬರ್ 30 ರವರೆಗೂ ಇ-ಕೆವೈಸಿ ಅವಧಿ ವಿಸ್ತರಣೆ ಮಾಡಿದೆ. ನ.30 ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

ಫಲಾನುಭವಿಗಳು ಅನ್ನಸೇವೆ ಆ್ಯಪ್ ಮೂಲಕ ಮೊಬೈಲ್‌ನಲ್ಲೇ ಇ-ಕೆವೈಸಿ ಪೂರ್ಣಗೊಳಿಸಬಹುದು. ಇಲ್ಲವೇ ತಮ್ಮ ಹತ್ತಿರದ ನ್ಯಾಯಬೆಲೆ (ಪಡಿತರ) ಅಂಗಡಿಗೆ ತೆರಳಿಯೂ ಈ ಪ್ರಕ್ರಿಯೆ ಮಾಡಿಸಿಕೊಳ್ಳಲು ಅವಕಾಶವಿದೆ. ಅಂತಿಮ ಗಡುವಿನೊಳಗೆ ಇ-ಕೆವೈಸಿ ಮುಗಿಸಿಕೊಳ್ಳಬೇಕು ಎಂದು ಇಲಾಖೆ ಮನವಿ ಮಾಡಿದೆ.

ಇ-ಕೆವೈಸಿ ಮಾಡುವುದು ಹೇಗೆ?

ಅನ್ನಸೇವೆ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು. ಇದಕ್ಕೆ ರೇಷನ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇದ್ದರೆ ಸಾಕು. ಹಂತಗಳು ಹೀಗಿವೆ;

  • ಮೊಬೈಲ್‌ನಲ್ಲಿ ಅನ್ನಸೇವೆ ಆ್ಯಪ್ ತೆರೆಯಿರಿ.
  • ಲಾಗಿನ್ ಪ್ರಕಾರದಲ್ಲಿ ‘‘ಸ್ವಯಂ/ನಾಗರಿಕ’’ ಆಯ್ಕೆ ಮಾಡಿ.
  • ಜಿಲ್ಲೆಗಳ ಪಟ್ಟಿಯಿಂದ ನಿಮ್ಮ ಜಿಲ್ಲೆ ಆಯ್ಕೆ ಮಾಡಿ.
  • ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.
  • ರೇಷನ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನೀಡಿ, ಬಂದ ಒಟಿಪಿ ಹಾಕಿ.
  • ತೆರೆದುಕೊಳ್ಳುವ ಪುಟದಲ್ಲಿ ಕುಟುಂಬ ಸದಸ್ಯರ ವಿವರ ಕಾಣಿಸುತ್ತದೆ. ಇ-ಕೆವೈಸಿ ಮಾಡಬೇಕಾದ ಸದಸ್ಯರನ್ನು ಆಯ್ಕೆ ಮಾಡಿ.
  • ಆ್ಯಪ್‌ನ ಸೂಚನೆಯಂತೆ ಫೇಸ್ ರೆಕಗ್ನಿಷನ್ ಪೂರ್ಣಗೊಳಿಸಿ.
  • ‘ಇ-ಕೆವೈಸಿ ಯಶಸ್ವಿ’ ಎಂಬ ಸಂದೇಶ ಬಂದರೆ ಪ್ರಕ್ರಿಯೆ ಪೂರ್ಣ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!