Wednesday, November 11, 2026
Homeಜಿಲ್ಲಾಸುದ್ದಿಮೇಗುಂದ ಹೋಬಳಿಯಲ್ಲಿ ಚುನಾವಣೆ ಬಹಿಷ್ಕಾರದ ಕೂಗು: ರಸ್ತೆಗೆ ಮನವಿ ಕೊಟ್ಟು ಬೇಸತ್ತು ಗ್ರಾಮಸ್ಥರಿಂದ ದೃಢ ನಿರ್ಧಾರ!

ಮೇಗುಂದ ಹೋಬಳಿಯಲ್ಲಿ ಚುನಾವಣೆ ಬಹಿಷ್ಕಾರದ ಕೂಗು: ರಸ್ತೆಗೆ ಮನವಿ ಕೊಟ್ಟು ಬೇಸತ್ತು ಗ್ರಾಮಸ್ಥರಿಂದ ದೃಢ ನಿರ್ಧಾರ!

Telegram Group
Join Now

ಕೊಪ್ಪ : ತಾಲೂಕಿನ ಮೇಗುಂದ ಹೋಬಳಿಯಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಹೆಚ್ಚಾಗುತ್ತಿದೆ.
ಅತ್ತಿಕೊಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಗುಂಡಿ ಗ್ರಾಮದಲ್ಲಿ ಈ ಭಾರೀ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.ರಸ್ತೆಗೆ ಮನವಿ ಕೊಟ್ಟು ಕೊಟ್ಟು ಬೇಸತ್ತು ಈ ಭಾರೀ ದೃಢ ನಿರ್ಧಾರ ಮಾಡಿದಂತಿದೆ ಗ್ರಾಮಸ್ಥರ ಮಾತುಗಳು.

ಕಳೆದ 20 ವರ್ಷಗಳಿಂದ ಹೊನ್ನಗುಂಡಿ ಗ್ರಾಮದ ರಸ್ತೆ ನಿರ್ಮಾಣವಾಗದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರೂ, ಈವರೆಗೆ ಅಧಿಕಾರದಲ್ಲಿದ್ದ ಅಥವಾ ಅಧಿಕಾರಕ್ಕಾಗಿ ಮತ ಕೇಳುತ್ತಿರುವ ಯಾವುದೇ ಪಕ್ಷ ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್  ನಮ್ಮ ಗ್ರಾಮದ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ.

ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಬರುವ ರಾಜಕೀಯ ಪಕ್ಷಗಳಿಗೆ ನಮ್ಮದೊಂದು ಪ್ರಶ್ನೆ:20 ವರ್ಷಗಳಿಂದ ನಮ್ಮ ಗ್ರಾಮದ ರಸ್ತೆ ಕಾಣದ ನಿಮಗೆ, ಚುನಾವಣೆಯ ಸಮಯದಲ್ಲಿ ಮಾತ್ರ ನಮ್ಮ ಮತಗಳು ಹೇಗೆ ನೆನಪಾಗುತ್ತವೆ? ಪಕ್ಷಗಳು ಬೇರೆಬೇರೆಯಾಗಿರಬಹುದು, ಆದರೆ ನಮ್ಮ ಗ್ರಾಮದ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ.

ಇನ್ನು ಸುಳ್ಳು ಭರವಸೆಗಳಿಗೆ ಮರುಳಾಗುವುದಿಲ್ಲ. ರಸ್ತೆ ನಿರ್ಮಾಣಕ್ಕೆ ಸ್ಪಷ್ಟ ಭರವಸೆ ಮಾತ್ರವಲ್ಲ, ಕಾರ್ಯರೂಪದಲ್ಲಿ ಕೆಲಸ ಆರಂಭವಾಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ.

ರಸ್ತೆ ಇಲ್ಲದ ಊರಿಗೆ ಮತದಾನದ ಸಂಭ್ರಮವೇಕೆ?

ಹೊನ್ನಗುಂಡಿ ಗ್ರಾಮದ ರಸ್ತೆ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಚುನಾವಣಾ ಬಹಿಷ್ಕಾರದ ನಿರ್ಧಾರವನ್ನು ಗ್ರಾಮಸ್ಥರು ಪರಿಗಣಿಸಿದ್ದಾರೆ.ನಮಗೆ ರಾಜಕೀಯ ಬೇಡ, ಮೂಲಭೂತ ಸೌಕರ್ಯ ಬೇಕು. ಮತ ಕೇಳುವ ಮೊದಲು ರಸ್ತೆ ಮಾಡಿ ತೋರಿಸಿ. ಮೂಲಭೂತ ಸೌಕರ್ಯ ಇಲ್ಲದೇ ಮತದಾನ ಮಾಡುವುದಿಲ್ಲ ಎನ್ನುತ್ತಿದ್ದಾರೆ ಹೊನ್ನಗುಂಡಿ ಗ್ರಾಮಸ್ಥರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!