Tuesday, August 11, 2026
Homeಜಿಲ್ಲಾಸುದ್ದಿಜಯಪುರ: ಮಹಿಳೆಯ ಮೇಲೆ ಕಾಡುಕೋಣ ದಾಳಿ: ಮುಖ, ಸೊಂಟ ಭಾಗಕ್ಕೆ ತೀವ್ರ ಗಾಯ!

ಜಯಪುರ: ಮಹಿಳೆಯ ಮೇಲೆ ಕಾಡುಕೋಣ ದಾಳಿ: ಮುಖ, ಸೊಂಟ ಭಾಗಕ್ಕೆ ತೀವ್ರ ಗಾಯ!

Telegram Group
Join Now

ಜಯಪುರ: ಜಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುತ್ತಿಖಾನ್ ಎಸ್ಟೇಟಿನ ಕಾಫಿ ತೋಟದಲ್ಲಿ ಗೊಬ್ಬರ ಹಾಕುತ್ತಿದ್ದ ಮಹಿಳೆಯ ಮೇಲೆ ಬುಧವಾರ ಕಾಡುಕೋಣ ಏಕಾಏಕಿ ದಾಳಿ ಮಾಡಿದ್ದು ಮಹಿಳೆಗೆ ಮುಖ ಹಾಗೂ ಸೊಂಟದ ಭಾಗಕ್ಕೆ ತೀವ್ರ ಗಾಯಗಳಾಗಿವೆ.

ಗಾಳಿಗಂಡಿ ಗ್ರಾಮದ ಬೇಬಿ 56 ವರ್ಷ ಇವರು ಗುತ್ತಿಖಾನ್ ಎಸ್ಟೇಟಿನಲ್ಲಿ ಕೆಲಸ ಮಾಡುವಾಗ ಈ ಘಟನೆ ನಡೆದಿದೆ. ಚಿಕಿತ್ಸೆಗಾಗಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅರಣ್ಯ ಇಲಾಖೆಯವರು ಭೇಟಿ ನೀಡಿದ್ದು ಸೂಕ್ತ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

ಮಲೆನಾಡಿನಲ್ಲಿ ನಿರಂತರ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆಯವರು ಕಾಡುಪ್ರಾಣಿಗಳಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments