ಚಿಕ್ಕಮಗಳೂರು : ನಗರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಕುಖ್ಯಾತ ಚಡ್ಡಿ ಗ್ಯಾಂಗಿನ ಇಬ್ಬರು ಸದಸ್ಯರ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 32 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಹೌದು .. ಚಿಕ್ಕಮಗಳೂರು ನಗರ ಸೇರಿ ರಾಜ್ಯದ ವಿವಿಧ ಕಡೆ ನಡೆಸಿದ್ದ ಕಳ್ಳತನ ಪ್ರಕರಣ ಸಂಬಂಧ ಚಡ್ಡಿ ಗ್ಯಾಂಗಿನ 17 ಪ್ರಕರಣಗಳನ್ನ ಚಿಕ್ಕಮಗಳೂರು ಪೊಲೀಸರು ಭೇದಿಸಿದ್ದಾರೆ. ಮಹಾರಾಷ್ಟ್ರ ಮೂಲದ ಪಪ್ಪು ಟಿಪ್ಪು ಪವಾರ್ ಹಾಗೂ ಮಂಗೇಶ್ ಅಂಕುಶ್ ಶಿಂಧೆ ಬಂಧಿತ ಆರೋಪಿಗಳಾಗಿದ್ದಾರೆ. ಕದ್ದಿದ್ದ 32 ಲಕ್ಷ ಮೌಲ್ಯದ ವಸ್ತುಗಳ ಸಮೇತ ಇಬ್ಬರನ್ನ ಅರೆಸ್ಟ್ ಮಾಡಲಾಗಿದೆ.
ಈ ಆರೋಪಿಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಡ್ಡಿಗ್ಯಾಂಗ್ ಕಳ್ಳತನಕ್ಕೆ ಇಳಿಯುತ್ತಿತ್ತು. ಇನ್ನು ಆರೋಪಿಗಳಿಂದ 495 ಗ್ರಾಂ ಚಿನ್ನ, 1010 ಗ್ರಾಂ ಬೆಳ್ಳಿ, 75 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ.
ನಗರದ ಪೊಲೀಸ್ ಕ್ವಾಟ್ರಸ್ಸ್ ಕಳ್ಳತನ ಪ್ರಕರಣದಲ್ಲಿ ಎಸ್ಪಿ ವಿಕ್ರಂ ಅಮಟೆ ವಿಶೇಷ ತಂಡ ರಚಿಸಿದ್ರು. ಎಎಸ್ಪಿ ಜಯಕುಮಾರ್, ಡಿವೈಎಸ್ಪಿ ಶೈಲೇಂದ್ರ, ನಗರ ರಾಣೆ ಪಿಐ ಅಭಯ್ ಪ್ರಕಾಶ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಎರಡೂವರೆ ತಿಂಗಳಲ್ಲಿ 400ಕ್ಕೂ ಹೆಚ್ಚು ಸಿಸಿಟಿವಿ ಫೂಟೇಜ್ ಗಳನ್ನ ಪೊಲೀಸರು ಕಲೆಕ್ಟ್ ಮಾಡಿದ್ರು. ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ಗದಗ ಎಲ್ಲಾ ಕಡೆ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
