Saturday, August 15, 2026
Homeಕ್ರೈಮ್ಸಕಲೇಶಪುರ: ಪುರಸಭೆ ಮುಖ್ಯ ಕಚೇರಿಗೆ ಬೆಂಕಿ ಹಚ್ಚಿದ ಕೇಸ್:‌ ಪ್ರಮುಖ ಆರೋಪಿ ಬಂಧನ!

ಸಕಲೇಶಪುರ: ಪುರಸಭೆ ಮುಖ್ಯ ಕಚೇರಿಗೆ ಬೆಂಕಿ ಹಚ್ಚಿದ ಕೇಸ್:‌ ಪ್ರಮುಖ ಆರೋಪಿ ಬಂಧನ!

Telegram Group
Join Now

ಸಕಲೇಶಪುರ: ಪುರಸಭೆ ಮುಖ್ಯ ಕಚೇರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು .. ಪಟ್ಟಣದ ಕುಶಾಲನಗರ ನಿವಾಸಿಯಾದ ನಿಂಗರಾಜು ಅಲಿಯಾಸ್‌ ಲಕ್ಷ್ಮಿಗೌಡ ಎಂಬಾತನು ಶುಕ್ರವಾರ ಸಂಜೆ ಪುರಸಭೆ ಕಚೇರಿಗೆ ನುಗ್ಗಿ ಸಂಗ್ರಹವಾಗಿದ್ದ ಪ್ರಮುಖ ದಾಖಲೆಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದನು. ತಕ್ಷಣವೇ ಎಚ್ಚೆತ್ತ ಕಚೇರಿ ಸಿಬ್ಬಂದಿ ಬೆಂಕಿಯನ್ನು ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದರು.

ಪ್ರಕರಣ ಸಂಬಂಧ ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಪೊಲೀಸ್‌ ಇನ್ಸ್‌ ಪೆಕ್ಟರ್‌ ವಿ.ಸಿ.ವನರಾಜು ನೇತೃತ್ವದಲ್ಲಿ ತ್ವರಿತ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪುರಸಭೆ ಮುಖ್ಯ ಕಚೇರಿಗೆ ಬೆಂಕಿ ಹಚ್ಚಲು ಪ್ರಮುಖ ಕಾರಣವೇನೆಂದು ತಿಳಿಯಲು ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಕಾರಣ ಸಿಗುತ್ತದೆ ಎಂಬ ವಿಶ್ವಾಸವಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments