Tuesday, February 10, 2026
Homeಕ್ರೈಮ್ಹಾಸನ: ಕ್ಷುಲ್ಲಕ ಕಾರಣಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ

ಹಾಸನ: ಕ್ಷುಲ್ಲಕ ಕಾರಣಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಬೈರಾಪುರ ಗ್ರಾಮದ ಸುಂಕ ವಸೂಲಾತಿ ಪಕ್ಕ ಟೀ ಕ್ಯಾಂಟೀನ್ ನಡೆಸುತ್ತಿರುವ ಭರತ್ ಮೇಲೆ ಸುಮಂತ ಹಾಗೂ ಸ್ನೇಹಿತರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ನಾಲ್ಕು ದಿನಗಳ ಹಿಂದೆ ಗಲಾಟೆ ನಡೆದಿದ್ದು ಭರತ್ ಹಾಗೂ ಉಳಿದ 5 ಜನರು ಹಿರಿಯರ ತೀರ್ಮಾನದಂತೆ ತಲಾ 18 ಸಾವಿರ ದಂಡ ಕಟ್ಟಿದ್ದರು.

ತೀರ್ಮಾನ ನಡೆದು ದಂಡ ಕಟ್ಟಿದ್ದರು ಸಹ ಸೋಮವಾರ ಸುಮಂತ ಹಾಗೂ ಸ್ನೇಹಿತರು ಭರತ್ ನನ್ನು ಕರೆಸಿಕೊಂಡು ಬಟ್ಟೆ ಬಿಚ್ಚಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೈದು ಹಲ್ಲೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಆಲೂರು ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!