Tuesday, August 11, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಡಿಕೆಶಿ ಸಿಎಂ ಆಗೋದನ್ನ ತಡೆಯೋಕಾಗಲ್ಲ‌: ಬಗ್ಗುಂಜಿ ಮಠದ ಗುರೂಜಿ ಸ್ಫೋಟಕ ಭವಿಷ್ಯ!

ಚಿಕ್ಕಮಗಳೂರು: ಡಿಕೆಶಿ ಸಿಎಂ ಆಗೋದನ್ನ ತಡೆಯೋಕಾಗಲ್ಲ‌: ಬಗ್ಗುಂಜಿ ಮಠದ ಗುರೂಜಿ ಸ್ಫೋಟಕ ಭವಿಷ್ಯ!

Telegram Group
Join Now

ಚಿಕ್ಕಮಗಳೂರು:  ಡಿಕೆ ಶಿವಕುಮಾರ್ ಗೆ ರಾಜಲಕ್ಷ್ಮಿ ಯೋಗ ಇದೆ, ನ.26ರ ಬಳಿಕ ಸಿಎಂ ಆಗೋದನ್ನ ತಡೆಯೋಕಾಗಲ್ಲ‌ ಎಂದು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಗ್ಗುಂಜಿ ಮಠದ ವೆಂಕಟೇಶ ಗುರೂಜಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಬಿರುಗಾಳಿ ಜೋರಾಗ್ತಿದೆ. ಈಚೆಗೆ ಡಿಕೆಶಿ ಮುಂದಿನ ಸಿಎಂ ಆಗಬೇಕೆಂದು ಬಿಹಾರಿ ಮತದಾರರಿಂದ ಕೂಗು ಕೇಳಿಬಂದ ಬೆನ್ನಲ್ಲೇ ಸಿಎಂ ಗರಂ ಆಗಿದ್ದರು. ಇಷ್ಟುದಿನ ತಾಳ್ಮೆಯಿಂದ ನಗುನಗುತ್ತಲೇ ಉತ್ತರಿಸುತ್ತಿದ್ದ ಸಿಎಂ ಹೈಕಮಾಂಡ್ ಹೇಳಿದ್ದಷ್ಟೇ ಫೈನಲ್ ಅಂತ ಗುಡುಗಿದ್ದರು. ಈ ಬೆನ್ನಲ್ಲೇ ಈ ಬೆನ್ನಲ್ಲೇ ಬಗ್ಗುಂಜಿ ಮಠದ ವೆಂಕಟೇಶ ಗುರೂಜಿ ಭವಿಷ್ಯ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ನವೆಂಬರ್ 26ರ ಬಳಿಕ ಡಿ.ಕೆ ಶಿವಕುಮಾರ್‌ ಸಿಎಂ ಆಗೋದನ್ನ ಯಾರೂ ತಡೆಯೋಕಾಗಲ್ಲ ಅಂತ ಭವಿಷ್ಯ ನುಡಿದಿದ್ದಾರೆ.

ಡಿಕೆ ಶಿವಕುಮಾರ್‌ ಅವರಿಗೆ ಸಿಎಂ ಯೋಗ ಇದೆ, ಆಗೇ ಆಗ್ತಾರೆ. 2031ರ ವರೆಗೆ ರಾಜನಂತೆ ಇರ್ತಾರೆ. ಏಕೆಂದ್ರೆ ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ಈ ಯೋಗ ಎಲ್ಲರಿಗೂ ಇರಲ್ಲ, ಅವರ ಜಾತಕದಲ್ಲಿ ಇದೆ. ಹಾಗಾಗಿ ಸಿಎಂ ಆಗೇ ಆಗ್ತಾರೆ. ಒಂದೂವರೆ ವರ್ಷದ ಹಿಂದೆಯೇ ಅವರಿಗೆ ಹೇಳಿ ಮಂತ್ರಾಕ್ಷತೆ ಕೊಟ್ಟಿದ್ದೇನೆ. ಅವರಿಗೆ ಮುಖ್ಯಮಂತ್ರಿ ಯೋಗ ಇದೆ, ಅದನ್ನ ಯಾರೂ ತಪ್ಪಿಸಲು ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments