Tuesday, March 31, 2026
Homeಜಿಲ್ಲಾಸುದ್ದಿಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಹಲವು ಬೇಡಿಕೆ: ಈಡೇರದಿದ್ದರೆ ಹೋರಾಟದ ಎಚ್ಚರಿಕೆ

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಹಲವು ಬೇಡಿಕೆ: ಈಡೇರದಿದ್ದರೆ ಹೋರಾಟದ ಎಚ್ಚರಿಕೆ


ಶೃಂಗೇರಿ: ಕಳೆದೊಂದು ವಾರದ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗದ್ದೆ ಊರಿನಲ್ಲಿ ಒಂದೇ ದಿನ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು ಈ ದುರ್ಘಟನೆ ಸಂಭವಿಸಿದ್ದ ಬೆನ್ನಲ್ಲೇ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರಾಶ್ರಿತರು ಸಭೆ ಸೇರಿ ಸರ್ಕಾರದಿಂದ ತಮಗೆ ಸಿಗಬೇಕಾದ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಗಳ ಬಗ್ಗೆ ಧ್ವನಿ ಎತ್ತುವ ಸಲುವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ ವಸತಿ ನಿರಾಶ್ರಿತ ಹೋರಾಟ ಸಮಿತಿ ಎಂಬ ಸಮಿತಿಯೊಂದನ್ನು ರಚನೆ ಮಾಡಿ ಎಂದು ಸುದ್ದಿಗೋಷ್ಠಿಯನ್ನು ನಡೆಸಿದೆ.

ಸಮಿತಿಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದು ಈ ಬೇಡಿಕೆಗಳನ್ನು ಈಡೇರಿಸಿ ನಿರಾಶ್ರಿತರನ್ನು ಗೌರವತವಾಗಿ ಕಳಿಸಿ ಪುನರ್ವಸತಿ ಕಲ್ಪಿಸಿ ಕೊಡಬೇಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ


ಸರ್ಕಾರ 2005 ಕೇಂದ್ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ಹಾಗೂ ಪುನರ್ವಸತಿಯನ್ನು ಕೊಡುವುದಾಗಿ ಹೇಳಿದ್ದು ಈ ಮಧ್ಯೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ರದ್ದುಗೊಳಿಸಬೇಕೆಂಬ ಕೂಗು ಹೋರಾಟವು ನಡೆದಿತ್ತು ಈ ಹೋರಾಟದಲ್ಲಿ ಕೆಲವು ಬಾಹ್ಯ ಶಕ್ತಿಗಳು ಬಂದು ಕೆಲವರು ಅನಿವಾರ್ಯವಾಗಿ ಆ ಪ್ರದೇಶದಿಂದ ಒಕ್ಕಲಿಳುವಂತಾಯಿತು ಆಗ ಸರ್ಕಾರ ಭೂಸ್ವಾಧೀನ ಕಾಯ್ದೆ ಹೊರತುಪಡಿಸಿ ಸ್ವ ಇಚ್ಛೆಯಿಂದ ಹೋಗುವರಿಗೆ ಪರಿಹಾರ ಕೊಡುವುದಾಗಿ ಘೋಷಿಸಿತ್ತು ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೂಲ ನಿವಾಸಿಗಳಿಗೆ ಮಾರಕವಾಗಿ ಪರಿಗಣಿಸಿತ್ತು ಸರ್ಕಾರ ಭೂಸ್ವಾಧೀನ ಕಾಯ್ದೆಡಿ ಪರಿಹಾರ ಕೊಟ್ಟಿದ್ದರೆ 1..4 ರಷ್ಟು ಪರಿಹಾರ ಪುನರ್ವಸತಿ ಸಿಗುತ್ತಿತ್ತು.

ಆದರೆ ಸ್ವಯಚೆಯಿಂದ ರಾಷ್ಟ್ರೀಯ ಉದ್ಯಾನವನದಿಂದ ಹೊರ ಹೋದವರಿಗೆ1:1 ರಷ್ಟು ಪರಿಹರ ಸಿಕ್ಕಿತ್ತು 2005 ರಲ್ಲಿ ಪುನರ್ವಸತಿ ಕೊಡುವ ಸಂದರ್ಭದಲ್ಲಿ ಜಾಗದ ವ್ಯಾಲ್ಯೂಯೇಷನ್ ಬದಲಿಗೆ ಜಾಗ ಕೊಡುವ ಬದಲು ಹಣ ನೀಡಲಾಯಿತು ಹೀಗೆ ಒಂದಿಷ್ಟು ನ್ಯೂನ್ಯತೆಗಳು ಇದ್ದವು ಈ ಸಂದರ್ಭದಲ್ಲಿ 10 ಎಕರೆ ಜಮೀನು ಹೊಂದಿದವರನ್ನು ದೊಡ್ಡ ಹಿಡುವಳಿದಾರರು ಐದರಿಂದ ಎಂಟು ಎಕರೆ ಜಮೀನು ಹೊಂದಿದವರನ್ನು ಮಧ್ಯಮ ಹಿಡುವಳಿದಾರರು 5 ಎಕರೆಗಿಂತ ಕಡಿಮೆ ಜಮೀನು ಹೊಂದಿದವರನ್ನು ಸಣ್ಣ ಹಿಡುವಳಿದಾರರೆಂದು ಮತ್ತು ಭೂ ರಹಿತರ ಪಟ್ಟಿಯನ್ನು ಸಿದ್ಧಪಡಿಸಲಾಯಿತು

ಈ ಸಂದರ್ಭದಲ್ಲಿ ದೊಡ್ಡ ಹಿಡುವಳಿದಾರರಿಗೆ ಪುನರ್ ವಸತಿ ಸಮಯದಲ್ಲಿ ಐದು ಎಕರೆ ಜಾಗ ಕೊಡದಿದ್ದ ಪಕ್ಷದಲ್ಲಿ 500000 ರೂಗಳಂತೆ 2.50 ಲಕ್ಷ ರೂ ಹಣವನ್ನು ಕೊಡುವುದಾಗಿ ಮಧ್ಯಮ ಹಿಡಿವಳಿದಾರರಿಗೆ 3 ಎಕರೆ ಜಮೀನು ಅಥವಾ50.000 ರೂಗಳಂತೆ 1.50 ಕೊಡುವುದಾಗಿ ಹಾಗೂ ಸಣ್ಣ ಹಿಡುವಳಿದಾರರು ಹಾಗೂ ಭೂ ರೈತರಿಗೆ ಎರಡು ಎಕರೆ ಜಮೀನು ಅಥವಾ ಒಂದು ಲಕ್ಷ ಹಣ ಕೊಡುವುದಾಗಿ ಹೇಳಿದ್ದರು ಆದರೆ ಈಗಲೂ ಸರ್ಕಾರ ಅದೇ ವ್ಯಾಲ್ಯೂಯೇಷನ್ ಮಾಡ್ತಾ ಇದೆ ಕೇವಲ ಭೂ ರಹಿತರ ಉದಾಹರಣೆಯನ್ನು ತೆಗೆದುಕೊಂಡು ಪಿಡಬ್ಲ್ಯೂ ಪ್ರಕಾರ ಒಂದು ಮನೆಗೆ ಮೂರು ಅಥವಾ ನಾಲ್ಕು ಲಕ್ಷ ವ್ಯಾಲ್ಯೂಯೇಷನ್ ಆಗುತ್ತೆ ಪರಿಹಾರ ಒಂದು ಲಕ್ಷ ಸಿಗುತ್ತೆ ಒಟ್ಟು ನಾಲ್ಕು ಐದು ಲಕ್ಷ ಪರಿಹಾರ ಕೊಡಲಾಗುತ್ತಿದೆ ಸರ್ಕಾರ ಕಾಡುಪ್ರಾಣಿಗಳಿಂದ ಮನುಷ್ಯನಿಗೆ ಹಾನಿಯಾದರೆ 20 ಲಕ್ಷ ಪರಿಹಾರ ನೀಡುತ್ತಿದೆ ಆದರೆ ಇಲ್ಲಿಂದ ಒಂದು ಕುಟುಂಬಕ್ಕೆ ಪುನರ್ವಸತಿಗಾಗಿ ನಾಲ್ಕು ಐದು ಲಕ್ಷ ರೂಗಳನ್ನು ಕೊಡಲಾಗುತ್ತಿದೆ.

2005 ರಲ್ಲಿ ಮಾಡಿರುವ ಪ್ಯಾಕೇಜ್ ಅನ್ನು2025 ರಲ್ಲು ಅದೇ ಪ್ಯಾಕೇಜನ್ನು ನೀಡಲಾಗುತ್ತಿದೆ ಹೀಗಿರುವಾಗ ಇನ್ನು ಹೀಗೆ ಸುಮ್ಮನಿದ್ದರೆ ನಮ್ಮ ಜೀವನ ಸಂಪೂರ್ಣ ನೆಲಕಚ್ಚಿ ಹೋಗುವುದನ್ನು ಮನಗಂಡ ಮೂಲ ನಿವಾಸಿಗಳೆಲ್ಲ ಸೇರಿ ಸಮಿತಿಯೊಂದನ್ನು ರಚಿಸಿಕೊಂಡು ಹೋರಾಟದ ಹಾದಿಯನ್ನು ಹಿಡಿಯುವ ಅನಿವಾರ್ಯತೆಯನ್ನು ವ್ಯಕ್ತಪಡಿಸಿಕೊಂಡಿದ್ದಾರೆ ಪುನರ್ವಸತಿ ಪ್ಯಾಕೇಜ್ ಅನ್ನು ಪುನಃ ಪರಿಷ್ಕರಿಸಿ ಇಂದಿನ ಮಾರುಕಟ್ಟೆ ಮೌಲ್ಯಕ್ಕೆ ಅಲ್ಲಿನ ಮೂಲ ನಿವಾಸಿಗಳಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಹಾಗೂ ಒಂದು ಕುಟುಂಬಕ್ಕೆ 50 ಲಕ್ಷ ಪರಿಹಾರದಂತೆ ಪ್ಯಾಕೇಜ್ ಘೋಷಿಸಬೇಕೆಂದು ಸಮಿತಿಯ ಅರುಣ್ ಕುಮಾರ್ ಪುನರ್ವಸತಿ ಯೋಜನೆ ಯಲ್ಲಾಗುತ್ತಿರುವ ನ್ಯೂನ್ಯತೆಗಳ ಬಗ್ಗೆ ಸರ್ಕಾರವನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಸುನಿಲ್ ಅರುಣ್ ಕುಮಾರ್ ರಾಜೇಶ್ ದಿನೇಶ್ ಹೆಗಡೆ ಭರತ್ ಹೋರಾಟ ಸಮಿತಿಯ ಸದಸ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!