ಮೂಡಿಗೆರೆ : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಅಭಿವೃದ್ದಿ ಪತದಲ್ಲಿ ಮುನ್ನಡೆಯುತ್ತಾ ಬಂದಿದ್ದು. ಸಾರ್ವಜನಿಕರು ಮತ್ತು ರೈತರಿಗೆ ಅನುಕೂಲವಾಗಲೆಂದು ಈ ಸಾಲಿನಲ್ಲಿ ರೈತಭವನದ ಕಾರ್ಯಕ್ರಮಗಳಿಗೆ 2500-3000 ಸಾವಿರ ಜನರಿಗೆ ಅಡಿಗೆ ವ್ಯವಸ್ಥೆಗೆ ಪಾತ್ರೆಗಳನ್ನು ಖರಿದಿಸಲಾಗಿದೆ ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಲುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಾಕಾರ ಸಂಘದ ಅಧ್ಯಕ್ಷ ಎಂ.ಎಲ್.ಕಲ್ಲೇಶ್ ತಿಳಿಸಿದರು
ಹೆಚ್.ಎಸ್.ಚಂದ್ರೇಗೌಡ ಬಡಾವಣೆಯಲ್ಲಿರುವ ಸಂಘದ ರೈತಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ರೈತಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ಪಾರ್ಕೀಂಗ್ ವ್ಯವಸ್ಥೆ ಕಲ್ಪಿಸಲಾಗಿದೆ, ಮತ್ತು ಪಟ್ಟಣದ ಮುಖ್ಯ ರಸ್ತೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸಂಘದ ಕಚೇರಿ ಕಟ್ಟಡವನ್ನು ಕೆಡವಲಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಸಜ್ಜಾಗುತ್ತಿದೆ ಎಂದರು.
ಮಾಕೋನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವತ್ ನೂತನ ಕಟ್ಟಡ ನಿರ್ಮಿಸುವಾಗ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಗ್ ವ್ಯವಸ್ಥೆ ಮಾಡಿ ಕಟ್ಟಡ ನಿರ್ಮಿಸುವಂತೆ ಸಲಹೇ ನೀಡಿದರು. ಮತ್ತು ರೈತಭವನದಲ್ಲಿರುವ ಕುರ್ಚಿಗಳು ಬಹಳ ಹಳೆಯದಾಗಿದ್ದು ಕೆಲವೊಂದು ಒಡೆದುಹೋಗಿರುವ ಬಗ್ಗೆ ತಿಳಿಸಿ ಹೊಸ ಕುರ್ಚಿಗಳ ಅಳವಡಿಕೆಯ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರು. ಮತ್ತು ಸಭೆಗೆ ಆಗಮಿಸಿದ್ದ ಸದಸ್ಯರುಗಳು ರೈತ ಭವನದ ಕೆಲವು ಲೋಪಗಳನ್ನು ಸರಿ ಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಲೋಪಗಳನ್ನ ಸರಿ ಪಡಿಸುವ ಭರವಸೆಯನ್ನು ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ ನಿರ್ದೆಶಕರುಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಳಿಗೆ, ನಿವೃತ್ತಿ ಹೊಂದಿದ ನೌಕರರಿಗೆ ಹಾಗೂ ಸಂಘದ ಸದಸ್ಯರುಗಳಿಗೆ ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯವನ್ನು ಹಿರಿಯರಾದ ಒ.ಎಸ್.ಗೋಪಾಲಗೌಡರು ಉದ್ಘಾಟಿಸಿದರು,ನಿದೇಶಕ ಎಂ.ಕೆ.ಚಂದ್ರೇಶ್ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಹೆಚ್.ಹೆಚ್.ವಿವೇಕ್ ವಾರ್ಷಿಕ ವರದಿ ಮಂಡಿಸಿದರು
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕೆ.ಬಿ.ಗಣೇಶ್,ನಿರ್ದೇಶಕರುಗಳಾ ದ ಟಿ.ಎಂ.ಗಜೇಂಧ್ರ, ಎಂ.ಎಸ್.ಪ್ರಸನ್ನ, ಜಿ.ಎಂ.ಪ್ರಸನ್ನ ಕುಮಾರ್, ರಂಜನ್ ಅಜಿತ್ ಕುಮಾರ್, ಪಿ.ಜಿ.ಅನುಕುಮಾರ್, ಶ್ರೀಮತಿ ಬಿ.ಎಲ್.ವಿದ್ಯಾ, ಶ್ರೀಮತಿ ಪುಟ್ಟಮ್ಮ ಎಸ್.ಸಿ., ಟಿ.ಎ.ಶೇಖರ್ ಬಂಗೇರ, ರಮೇಶ್ , ಈಶ್ವರ್ ಗೌಡ, ಹೆಚ್.ಜಿ.ಉತ್ತಮ ಕುಮಾರ್,ಹೆಚ್.ಎಸ್.ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
