ಜಯಪುರ : ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪಾಠ ಪ್ರವಚನ ಹೇಗೆ ಅಗತ್ಯವೋ ಹಾಗೆಯೇ ಮಕ್ಕಳ ಶಾರೀರಕ, ಮಾನಸಿಕ ಅಭಿವೃದ್ಧಿಗೆ ಕ್ರೀಡೆ ಅಗತ್ಯವಾಗಿದೆ ಎಂದು ಕೊಪ್ಪ ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಓಣಿತೋಟ ರತ್ನಾಕರ ಹೇಳಿದರು.
ಜಯಪುರ ಬಿಜಿಎಸ್ ಮೈದಾನದಲ್ಲಿ ನಡೆದ 17ವರ್ಷದೊಳಗಿನ ಬಾಲಕ ಬಾಲಕಿಯರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಗೊಂದಲದ ನೀತಿಯಿಂದಾಗಿ ಆಗಸ್ಟ್ ನಲ್ಲಿ ನಡೆಯಬೇಕಿದ್ದ, ಕ್ರೀಡಾಕೂಟ ಈಗ ನಡೆಯುತ್ತಿದ್ದೂ, ಪರೀಕ್ಷಾ ಸಮಯದಲ್ಲಿ ಇದು ಹೆಚ್ಚು ಒತ್ತಡಕ್ಕೆ ಕಾರಣವಾಗಿದೆ ಎಂದರು.
ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳಯುವಿಕೆ ಪ್ರಮುಖವಾಗಿದೆ ಎಂದರು.
ನಂತರ ಕೆಡಿಪಿ ಸದಸ್ಯ ಚಿಂತನ್ ಬೆಳಗೊಳ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ಕ್ರೀಡೆಗಳ ಕುರಿತ ಪಾಠಗಳನ್ನು ಅಳವಡಿಸಬೇಕು, ಹಾಗೂ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಮೀಸಲಾತಿಯನ್ನು ನೀಡಬೇಕು ಎಂದರು.
ಕ್ರೀಡಾಕೂಟದಲ್ಲಿ ಕೊಪ್ಪ ತಾಲೂಕಿನ 3 ವಲಯಗಳ 29 ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಿಜಿಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎ ಸಿ ವಜ್ರಪ್ಪ, ಮುಖ್ಯ ಶಿಕ್ಷಕ ಮಂಜಪ್ಪ ಕಂಬಳಿ, ಪ್ರಾಂಶುಪಾಲರುಗಳಾದ ಡಾ, ಮುಸ್ತಾಕ್ ಅಹಮದ್, ಮುರುಳಿಧರ್, ಶಿಕ್ಷಕಿ ಅರ್ಪಿತ ಡಿ ಏನ್, ದೈಹಿಕ ಶಿಕ್ಷಕ ಹನುಮಂತಪ್ಪ, ಉಪನ್ಯಾಸಕಿ ಗಾಯತ್ರಿದೇವಿ, ಮುಖಂಡರಾದ ಹೆಚ್ ಎಂ ಸತೀಶ್, ಸಾದಿಕ್, ಡಿ ಬಿ ರಾಜೇಂದ್ರ, ಬಿಇಓ ಜಯಣ್ಣ, ಸರ್ಕಾರಿ ನೌಕರರ ಸಂಘದ ರಾಜೇಶ್ ಹಾಗೂ ಇತರರರಿದ್ದರು.
21ಜೇವೈಪಿ 1: ಜಯಪುರ ಬಿಜಿಎಸ್ ಮೈದಾನದಲ್ಲಿ ಸೋಮವಾರ ನಡೆದ 17ವರ್ಷದೊಳಗಿನ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ವಿಜೇತರಿಗೆ ಗಣ್ಯರು ಪದಕ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಿದರು, ಸಂಸ್ಥೆಯ ಎ ಸಿ ವಜ್ರಪ್ಪ, ಮಂಜಪ್ಪ ಕಂಬಳಿ, ಮುರುಳಿಧರ್, ಸ್ಪಂದನ ಸಂಸ್ಥೆಯ ಅಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್, ಬಿಇಓ ಜಯಣ್ಣ, ಕೆಡಿಪಿ ಸದಸ್ಯ ಚಿಂತನ್ ಹಾಗೂ ಇತರರಿದ್ದರು.
ವರದಿ: ಶಶಿ ಬೆತ್ತದಕೊಳಲು
