Tuesday, August 11, 2026
Homeಜಿಲ್ಲಾಸುದ್ದಿಎನ್‌.ಆರ್.ಪುರ: ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹುಟ್ಟುಹಬ್ಬ ನಿಮಿತ್ತ ಯುವ ಕಾಂಗ್ರೆಸ್‌ ವತಿಯಿಂದ...

ಎನ್‌.ಆರ್.ಪುರ: ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹುಟ್ಟುಹಬ್ಬ ನಿಮಿತ್ತ ಯುವ ಕಾಂಗ್ರೆಸ್‌ ವತಿಯಿಂದ ರಕ್ತದಾನ ಶಿಬಿರ!

Telegram Group
Join Now

ಎನ್‌.ಆರ್.ಪುರ: ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬಾಳೆಹೊನ್ನೂರು ಬ್ಲಾಕ್ ನ ನರಸಿಂಹರಾಜಪುರದ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್‌ʼನ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಬಿವಿ ಶ್ರೀನಿವಾಸ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಜಿತ್ ಗೌಡ ಯುವ ಕಾಂಗ್ರೆಸ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಬಿವಿ ಶ್ರೀನಿವಾಸ್ ಅವರು ಪ್ರತಿಯೊಬ್ಬ ಯುವ ಕಾಂಗ್ರೆಸ್ ನ ಕಾರ್ಯಕರ್ತರಿಗೆ ಮಾದರಿ, ಯಾಕೆಂದರೆ ಭದ್ರಾವತಿ ಎಂಬ ಒಂದು ಚಿಕ್ಕ ಪಟ್ಟಣದಿಂದ ದೆಹಲಿ ಎಂಬ ರಾಜಧಾನಿಯಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ ಯುವ ನಾಯಕ, ಸಾಮಾನ್ಯ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ರಾಜ್ಯದಲ್ಲಿ ರಾಷ್ಟ್ರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸೇವೆ ಮತ್ತು ನೂರಾರು ಹೋರಾಟಗಳನ್ನು ನಡೆಸಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯ ಮೆಚ್ಚುಗೆಗೆ ಪಾತ್ರರಾಗಿ ಐದು ವರ್ಷಗಳ ಕಾಲ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾಗಿ ದೇಶದಾದ್ಯಂತ ನೂರಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ,ಅದರಲ್ಲಿ ಪ್ರಮುಖವಾಗಿ ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಸರ್ಕಾರವೇ ಕೈಕಟ್ಟಿ ಕುಳಿತಾಗ ಬಿವಿ ಶ್ರೀನಿವಾಸ್ ಅವರು ಜೀವದ ಹಂಗು ತೊರೆದು ಕೋರನಾ ರೋಗಿಗಳಿಗೆ ಸಾಕಷ್ಟು ಸಹಾಯ ಮಾಡುವುದರ ಮೂಲಕ ಆಕ್ಸಿಜನ್ ನೀಡುವುದರ ಮೂಲಕ ಆಕ್ಸಿಜನ್ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಖ್ಯಾತಿ ಹೊಂದಿದ್ದಾರೆ. ಆದುದರಿಂದ ನಾಯಕನಾಗಲು ಇಚ್ಛೆ ಪಡುವ ಪ್ರತಿಯೊಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತರಿಗೂ ಇವರು ಮಾದರಿ ಎಂದು ಹೇಳಿದ ಶ್ರೀಜಿತ್ ರವರು ಅವರ ಜನ್ಮದಿನವನ್ನು ಈ ರೀತಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಗುತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಜಿತ್ ಗೌಡ ದಂಡಿನಮಕ್ಕಿ, ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ರತನ್ ಗೌಡ ಅರಗಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಂಜೇಶ್ ಬಿಳುವ,ಅಭಿಲಾಶ್ ಎಮ್ ಪಿ, ಕೌಶಿಕ್ ಪಟೇಲ್, ಅಕ್ಸಿರಾ, ಮನೋಜ್ ಕೃಷ್ಣಮೂರ್ತಿ, ಯುವ ಮುಖಂಡರುಗಳಾದ ಧವನ್, ನಿತಿನ್, ವಿಜಯ್, ಸುಜಿತ್, ವಿವೇಕ್, ನಿಧಿಶ್, ಪ್ರಿಯೇಶ್, ಜಿನ್ಸ, ಜಮೀಲ್, ಕಾರ್ತೀಕ್ ಕಾರ್ಗದ್ದೆ, ನಂದನ್, ಪ್ರವೀಣ್, ಸೂರ್ಯ, ಸಂಜಯ್, ಹಾಗೂ ಇನ್ನೂ ಅನೇಕ ಯುವ ಮುಖಂಡರುಗಳು ಭಾಗವಹಿಸಿದ್ದರು


ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜುಬೇದ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ನರಸಿಂಹರಾಜಪುರ ಪಟ್ಟಣ ಕಾಂಗ್ರೆಸ್ ಅಧ್ಯಕ್ಷರಾದ ಉಪೇಂದ್ರ ಬಿಳಲ್ ಮನೆ, ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷರಾದ ಬಿನು,ಪಿಸಿಎಆರ್‌ಡಿ ಬ್ಯಾಂಕ್ ನಿರ್ದೇಶಕರಾದ ದೇವಂತ್ ರಾಜ್,ನಾಗರಾಜ್, ಕೇಶವ್ ಅವರು ಭಾಗವಹಿಸಿದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments