Saturday, August 8, 2026
Homeಜಿಲ್ಲಾಸುದ್ದಿಮೂಡಿಗೆರೆ :ರಸ್ತೆ ಕಾಮಗಾರಿ ಸಂಪೂರ್ಣ - ನಿಡಗೋಡು ಗ್ರಾಮಸ್ಥರಿಂದ ಶಾಸಕಿ ನಯನ ಮೋಟಮ್ಮಗೆ ಅಭಿನಂದನೆ

ಮೂಡಿಗೆರೆ :ರಸ್ತೆ ಕಾಮಗಾರಿ ಸಂಪೂರ್ಣ – ನಿಡಗೋಡು ಗ್ರಾಮಸ್ಥರಿಂದ ಶಾಸಕಿ ನಯನ ಮೋಟಮ್ಮಗೆ ಅಭಿನಂದನೆ

Telegram Group
Join Now

ಮೂಡಿಗೆರೆ : ನಿಡಗೋಡು ಗ್ರಾಮಸ್ಥರಿಂದ ಮೂಡಿಗೆರೆ ಕ್ಷೇತ್ರದ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ನವರಿಗೆ ರಸ್ತೆ ಕಾಮಗಾರಿ ಮುಗಿದ ಹಂತದಲ್ಲೇ ಬ್ಯಾನರ್ ಅಳವಡಿಸಿ ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಚಿನ್ನಿಗಾ ಗ್ರಾಂ,ಪಂ, ಅಧ್ಯಕ್ಷರು ಕು.ಲಕ್ಮೀ ಮಾತನಾಡಿ ಶಾಸಕಿ ನಯನ ಮೋಟಮ್ಮ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಗ್ರಾಮಕ್ಕೆ 25 ಲಕ್ಷದ ರಸ್ತೆಯಾಗಿರುವುದು ಸಂತೋಷವಾಗುತ್ತದೆ. ಮುಂದಿನ ಹಂತದ ರಸ್ತೆಗೆ ಕಾಮಗಾರಿಗೆ ಇನ್ನೂ ಅನುದಾನ ಬೇಕಾಗುತ್ತದೆ ಎಂದರು.

ಮುಖಂಡರಾದ ಸುಂದ್ರೇಶ್ ಹೊಯ್ಸಳಲು ಮಾತನಾಡಿ ಶಾಸಕರು ಎಲ್ಲಾ ಹಳ್ಳಿ ಹಳ್ಳಿಗಳಿಗೆ ರಸ್ತೆ ಹಾಗೂ ಶಾಲೆ ಇನ್ನಿತರ ಚಟುವಟಿಕೆಗಳಿಗೆ ಅನುದಾನ ನೀಡಿ ಸ್ಪಂದಿಸಿದ್ದಾರೆ ಎಂದರು

ಮುಖಂಡರಾದ ವಿಶ್ವಮಿತ್ರ ನಿಡಗೂಡು ಮಾತನಾಡಿ ನಮ್ಮ ಗ್ರಾಮಕ್ಕೆ ಹಾಗೂ ಹಲವು ಗ್ರಾಮಗಳಿಗೆ ಸಮುದಾಯ ಭವನಕ್ಕೆ ಅನುದಾನ ನೀಡಲಿದ್ದಾರೆ ಎಂದರು.

ಈ ಅಭಿನಂದನ ಕಾರ್ಯಕ್ರಮದಲ್ಲಿ ಮುಖಂಡರಾದ ಮಿತ್ರೇಶ್, ಚಂದ್ರಶೇಖರ್ಹೊ ಯ್ಸಳಲು, ಗಿರೀಶ್,ವೀಣಾ, ಜೈಪಾಲ, ಅಣ್ಣಪ್ಪ, ಧನಲಕ್ಷ್ಮಿ, ವಿನಂತಿ, ಶಾರದ, ಮುರುಗೇಶ್, ನವೀನ್, ನಾಗೇಶ್‌ ಮತ್ತಿತರರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments