Sunday, November 8, 2026
Homeಜಿಲ್ಲಾಸುದ್ದಿKoppa: ಶಾಸಕರ ಗುದ್ದಲಿಪೂಜೆಗೆ ವರುಷ, ಜನರಿಗಿಲ್ಲ ಆ ರಸ್ತೆಯಲ್ಲಿ ಓಡಾಡಲು ಹರುಷ.

Koppa: ಶಾಸಕರ ಗುದ್ದಲಿಪೂಜೆಗೆ ವರುಷ, ಜನರಿಗಿಲ್ಲ ಆ ರಸ್ತೆಯಲ್ಲಿ ಓಡಾಡಲು ಹರುಷ.

Telegram Group
Join Now

ಕೊಪ್ಪ: ತಾಲೂಕಿನ ಮೇಗುಂದ ಹೋಬಳಿಯ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈರೆದೇವರು ಗ್ರಾಮದ ಬಸ್ತಿ ಬಾಲಕ್ಕಿತೋಟ ರಸ್ತೆಗೆ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿಡಿ ರಾಜೇಗೌಡರು ಕಳೆದ ವರ್ಷ ನವೆಂಬರ್ 7 ತಾರೀಖಿನಂದು ಬಸ್ತಿ ಬಾಲಕ್ಕಿತೋಟ ರಸ್ತೆಗೆ ಗುದ್ದಲಿಪೂಜೆ ಕಾರ್ಯ ನೆರವೇರಿಸಿದ್ದರು.
ಶಾಸಕರು ರಸ್ತೆಯ ಗುದ್ದಲಿಪೂಜೆ ಮಾಡಿದ ವೇಗ ರಸ್ತೆಯ ಕಾಮಗಾರಿಗೆ ಮಾಡಲಿಲ್ಲ.

ಕಳೆದ ವರ್ಷ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆದ ಮತ್ತು ಆಗಬೇಕಿದ್ದ ಕಾಮಗಾರಿ ಕುರಿತು ಬೃಹತ್ ಸಭೆ ಮತ್ತು ಮೆರವಣಿಗೆ ಹಮ್ಮಿಕೊಂಡಿದ್ದರು.

ಬೈರೆದೇವರು ಸರ್ಕಲ್ ನಲ್ಲಿ ಬೈಕ್ ಜಾಥಕ್ಕೆ ಚಾಲನೆ ನೀಡಿ ಶಾಸಕರು ಬುಲೆಟ್ ಬೈಕ್ ಏರಿ ಬಂದು ರಸ್ತೆಗೆ ಗುದ್ದಲಿಪೂಜೆ ಮಾಡಿ ರಸ್ತೆಯ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಇಂದಿಗೆ ವರುಷವಾದರು ಆ ರಸ್ತೆ ಕಾಮಗಾರಿ ಆಗುವಂತೆ ಕಾಣುತ್ತಿಲ್ಲ.

*ಬಸ್ತಿ ಬಾಲಕ್ಕಿ ರಸ್ತೆಯೂ ಶೃಂಗೇರಿ ಹೊರನಾಡು ಸಂಪರ್ಕಿಸುವ ಹತ್ತಿರದ ರಸ್ತೆಯೂ ಹೌದು. ಆದರೆ ಆ ರಸ್ತೆಯ ಹೋರಾಟ ಇಂದು ನಿನ್ನೆಯದಲ್ಲ. ಅಷ್ಟೇ ಅಲ್ಲದೆ ಅಲ್ಲಿ ಆದ ಕೆಳ ಭಿನ್ನಾಭಿಪ್ರಾಯದಿಂದ ಗ್ರಾಮ ಪಂಚಾಯತಿ ಸದ್ಯಸರೊಬ್ಬರು ಕೋರ್ಟ್ ಮೆಟ್ಟಿಲು ಕೂಡ ಹತ್ತುವಂತಾಗಿತ್ತು.

ಗ್ರಾಮ ಪಂಚಾಯತಿಯ ಹೋರಾಟ
ಈ ರಸ್ತೆಗಾಗಿ ಗುಡ್ಡೆತೋಟ ಗ್ರಾಮ ಪಂಚಾಯತಿಯ ಶ್ರಮ ಮರೆಯುವಂತಿಲ್ಲ.ಸದಸ್ಯರು ಕೋರ್ಟ್ ಮೆಟ್ಟಿಲು ಹತ್ತುವಂತಾದರು ಪ್ರಕರಣ ಸುಖಾಂತ್ಯ ಮಾಡಿಸಿ ಸಾರ್ವ ಜನಿಕರಿಗೆ ಅನುಕೂಲ ಮಾಡಿಕೊಟ್ಟರು.
ಇಷ್ಟೆಲ್ಲ ಇತಿಹಾಸ ಗೊತ್ತಿದ್ದರೂ ಶಾಸಕರು ಗುದ್ದಲಿ ಪೂಜೆ ಮಾಡಿ ರಸ್ತೆ ಮಾಡದೆ ಕೈ ಬಿಟ್ಟಿರುವುದು ವಿಪರ್ಯಾಸ.ರಸ್ತೆ ಹೊಂಡಗುಂಡಿಗಳನ್ನ ಸ್ವಂತ ಹಣದಿಂದ ಮುಚ್ಚಿದ್ದ ಗ್ರಾಮ ಪಂಚಾಯತಿ ಸದಸ್ಯ.

ಗುಡ್ಡೆತೋಟ ಗ್ರಾಮ ಪಂಚಾಯತಿ ಆಗಿನ ಸದಸ್ಯರಾಗಿದ್ದ ಪ್ರಶಾಂತ್ ಜಾಲ್ಮರ ಆ ರಸ್ತೆಗೆ ಹಲವು ಭಾರೀ ತಮ್ಮ ಸ್ವಂತ ಹಣದಿಂದ ಹೊಂಡಗುಂಡಿಗಳನ್ನು ಮುಚ್ಚಿಸಿದ್ದಾರೆ.ಶಾಸಕರಿಗೂ ಹಲವು ಭಾರೀ ರಸ್ತೆ ಮಾಡಿಕೊಡುವಂತೆ ಮನವಿಯೂ ಮಾಡಿದ್ದಾರೆ.ಆದರೂ ಈ ರಸ್ತೆ ಆಗುವಂತೆ ಕಾಣುತ್ತಿಲ್ಲ.ಇನ್ನಾದರು ಶಾಸಕರು ಗುದ್ದಲಿಪೂಜೆ ಮಾಡಿದ ಈ ರಸ್ತೆಯನ್ನು ಮಾಡಿ ಕೊಡುತ್ತಾರ ಅನ್ನುವುದನ್ನು ಕಾದು ನೋಡಬೇಕಿದೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!