Tuesday, August 11, 2026
Homeಕ್ರೈಮ್ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ ಕೋಟ್ಯಾನ್‌ ಗೆ ಷರತ್ತು ಬದ್ಧ ಜಾಮೀನು

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ ಕೋಟ್ಯಾನ್‌ ಗೆ ಷರತ್ತು ಬದ್ಧ ಜಾಮೀನು

Telegram Group
Join Now

ಚಿಕ್ಕಮಗಳೂರು: ಗೃಹ ಸಚಿವ ಪರಮೇಶ್ವರ ವಿರುದ್ಧ ಅವಹೇಳನಾ ಆರೋಪದಡಿ ಜೈಲು ಸೇರಿದ್ದ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ ಕೋಟ್ಯಾನ್‌ ಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.

ನಾಲ್ಕು ದಿನಗಳಿಂದ ಜೈಲಿನಲ್ಲಿದ್ದ ಸಂತೋಷ್ ಕೋಟ್ಯಾನ್ ಅವರಿಗೆ ಇಂದು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ಸಂತೋಷ್ ಕೋಟ್ಯಾನ್‌ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣವು ದಾಖಲಾಗಿದ್ದು ಈ ಆರೋಪಗಳು ಸುಳ್ಳು ಎಂದು ಹೇಳಿ ಬಿಜೆಪಿ ಕಾರ್ಯಕರ್ತರು ನಗರ ಠಾಣೆ ಬಳಿ ಪ್ರತಿಭಟನೆ ನಡೆಸಿದ್ದರು.

ಜಿಲ್ಲಾ ನ್ಯಾಯಾಲಯದಲ್ಲಿ ಸಂತೋಷ್ ಪರವಾಗಿ ವಕೀಲ ಸುಧಾಕರ್ ಅವರು ವಾದ ಮಂಡಿಸಿದ್ದರು ಅಂತಿಮವಾಗಿ ಜಿಲ್ಲೆಯ ನ್ಯಾಯಾಲಯದ ಆದೇಶದ ಮೇರೆಗೆ ಸಂತೋಷ ಅವರಿಗೆ ಷರತ್ತು ಬದ್ಧ ಜಾಮೀನು ದೊರಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments