ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಕೆ.ಪಿ ಕಾಲರ್ -2 ಪುಂಡಾಟ ಮಿತಿ ಮೀರಿದೆ. ಜನರಿಗೆ ಉಪಟಳ ಕೊಡುತ್ತಿರುವ ಕಾಡಾನೆ ಸೆರೆಗೆ ಮತ್ತಿಗೋಡು, ದುಬಾರೆ ಕ್ಯಾಂಪ್ನಿಂದ ಕುಮ್ಕಿ ಆನೆಗಳ ತಂಡ ಆಗಮಿಸಿದ್ದು ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.
ಕಾರ್ಯಾಚರಣೆಗೆ ದುಬಾರೆ ಶಿಬಿರದಿಂದ ಐದು, ನಾಗರಹೊಳೆ ಶಿಬಿರದಿಂದ ಒಂದು ಕಾಡಾನೆ ಸೇರಿ ಆರು ಸಾಕಾನೆಗಳು ಬಂದಿವೆ. ಕುಮ್ಕಿ ಆನೆಗಳಾದ ಏಕಲವ್ಯ, ಧನಂಜಯ, ಲಕ್ಷ್ಮಣ, ಪ್ರಶಾಂತ, ಈಶ್ವರ, ಅಜ್ಜಯ್ಯ ಆನೆಗಳು ಆಗಮಿಸಿವೆ. ಬೇಲೂರು ತಾಲೂಕಿನ ಚಿಕ್ಕೋಲೆ ಬಳಿಯಿರುವ ತಾತ್ಕಾಲಿಕ ಕ್ಯಾಂಪ್ನಲ್ಲಿ ಆನೆಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಭುವನೇಶ್ವರಿ ಗುಂಪಿನ ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಕೆ ಮಾಡಲಾಗದಿದ್ದು ಬೇಲೂರು ತಾಲ್ಲೂಕಿನ, ಮಲಸಾವರ ಗ್ರಾಮದ ಬಳಿ ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಕೆ ಸತತ ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಾಗಿದ್ದು ಭುವನೇಶ್ವರಿ ಗುಂಪಿನಲ್ಲಿದ್ದ ಸುಮಾರು 30 ವರ್ಷದ ಹೆಣ್ಣಾನೆಯನ್ನು ಬೇರ್ಪಡಿಸಿ ಅರವಳಿಕೆ ಚುಚ್ಚುಮದ್ದು ನೀಡಿದ ವೈದ್ಯ ಡಾ.ವಾಸಿಂ
ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ಓಡಿ ಹೋದ ಕಾಡಾನೆ ಸುಮಾರು ಒಂದುವರೆ ಗಂಟೆ ನಂತರ ನಿಂತ ಕಾಡಾನೆಬಳಿಕ ಕಾಡಾನೆ ಅಕ್ಕಪಕ್ಕ ಎರಡು ಸಾಕಾನೆಗಳನ್ನು ನಿಲ್ಲಿಸಿಕೊಂಡು ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ.
ಮಳೆಯ ನಡುವೆಯೂ ನಡೆದ ಕಾರ್ಯಾಚರಣೆ ಇದೇ ಕಾಡಾನೆಗೆ 2023 ಜುಲೈ ತಿಂಗಳಿನಲ್ಲಿ ವಿದೇಶದಲ್ಲಿ ತಯಾರಾದ ರೆಡಿಯೋ ಕಾಲರ್ ಅಳವಡಿಸಲಾಗಿತ್ತುಎರಡೂವರೆ ವರ್ಷದಿಂದ ಮೂರು ವರ್ಷ ಬರುವ ರೆಡಿಯೋ ಕಾಲರ್ ಬ್ಯಾಟರಿಹದಿನೈದು ದಿನಗಳ ಮುಂಚೆಯೇ ಖಾಲಿಯಾಗಿದ್ದ ರೇಡಿಯೋ ಕಾಲರ್ ಬ್ಯಾಟರಿ
ಇಂದು ಭಾರತದಲಿ ತಯಾರಾದ ರೇಡಿಯೋ ಕಾಲರ್ ಅಳವಡಿಸಿದ ಅರಣ್ಯ ಇಲಾಖೆ ತಂಡ ಮಂಗಳವಾರವೂ ಮುಂದುವರೆಯಲಿರುವ ಕಾರ್ಯಾಚರಣೆ
ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದ ಡಿಎಫ್ಓ ಸೌರಭ್ಕುಮಾರ್, ಎಸಿಎಫ್ ಮೋಹನ್ಕುಮಾರ್, ಮಧು ಉಪಸ್ಥಿತಿಯಲ್ಲಿದ್ದರು.
