ಶೃಂಗೇರಿ/ಕೊಪ್ಪ: ಶೃಂಗೇರಿಯಲ್ಲಿ 4 ಗೋವುಗಳನ್ನು ಖರೀದಿಸಿ ಪರವಾನಗಿ, ದಾಖಲೆಗಳಿಲ್ಲದೇ ಅಕ್ರಮ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದವರನ್ನು ಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ.
4 ಹಸುಗಳು ಶೃಂಗೇರಿಯ ಉಮೇಶ್ ಎಂಬುವರಿಗೆ ಸೇರಿದ್ದಾಗಿದ್ದು, ಇವುಗಳನ್ನು ವಾಹನದಲ್ಲಿ ಸೂಕ್ತ ದಾಖಲೆಗಳಿಲ್ಲದೇ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಎನ್ ಆರ್ ಪುರ ತಾಲೂಕಿನ ಶೆಟ್ಟಿಕೊಪ್ಪದ ಬದ್ರುದ್ದೀನ್ ಮತ್ತು ಹನೀಫ್ ಎಂಬುವರನ್ನು ಹಾಗೂ ಸುಜುಕಿ ಸೂಪರ್ ಕ್ಯಾರಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮಧು, ಎಎಸ್ಐ ಮಹೇಶ್, ಪಿಸಿಗಳಾದ ಪ್ರಕಾಶ್, ಪ್ರಶಾಂತ್, ಯುವರಾಜ್, ಬಸವರಾಜ್ ಮತ್ತು ಸುರೇಶ್ರವರು ಭಾಗವಹಿಸಿದ್ದರು.
