ಚಿಕ್ಕಮಗಳೂರು: ಜಾತ್ಯತೀತ ಜನತಾದಳ ಪಕ್ಷವು ಅಸ್ತಿತ್ವಕ್ಕೆ ಬಂದು 25 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ 2026 ರ ಜನವರಿಯಲ್ಲಿ ರಜತ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಇದೇ ನವೆಂಬರ್ 22 ರಂದು ಬೆಂಗಳೂರಿನಲ್ಲಿ ಜನತಾದಳ ಪಕ್ಷದ ಅದ್ದೂರಿ ರಜತ ಮಹೋತ್ಸವ ಆಚರಣೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯ ಕಚೇರಿ ಬೆಂಗಳೂರಿನ ಜೆಪಿ ಭವನದಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಮಾಜಿ ಪ್ರಧಾನಿ, ಪಕ್ಷದ ಧುರೀಣ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಯನ್ನು ರೈತರ ನಾಯಕ, ಹೆಮ್ಮೆಯ ಮಾಜಿ ಪ್ರಧಾನಿ ಶ್ರೀ ಎಚ್. ಡಿ. ದೇವೇಗೌಡ ಅವರು ಉದ್ಘಾಟಿಸಲಿದ್ದು ಈ ಸಮಯದಲ್ಲಿ ರಾಜ್ಯದ ರೈತ ಪರ ಹೋರಾಟಗಾರರು. ಮಾಜಿ ಮುಖ್ಯ ಮಂತ್ರಿ ಹಾಲಿ ಕೇಂದ್ರ ಸಚಿವರಾದ ಶ್ರೀ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ರಾಷ್ಟ್ರೀಯ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ವಿವಿಧ ರಾಜ್ಯದ ಗಣ್ಯರು ಸೇರಿದಂತೆ ಆನೇಕ ನಾಯಕರುಗಳು ಸಾವಿರಾರು ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ ಹಾಗೂ ಪಕ್ಷ ಬೆಳೆದು ಬಂದ ಕಿರುಚಿತ್ರ ಪ್ರದರ್ಶನ ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರು ಆಗಮಿಸಿ ಮಾಧ್ಯಮಗಳ ಮುಖೇನ ಪ್ರಚಾರ ಮಾಡುವಂತೆ ಕೋರಿದರು
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕನ್ನಡಿಗರ ಧ್ವನಿಯಾಗಿ ಪ್ರಾದೇಶಿಕ ಪಕ್ಷ 25 ವರ್ಷ ಪೂರೈಸಿದ ಹೆಮ್ಮೆ ಪಕ್ಷ ಜೆಡಿಎಸ್ ಆಗಿದೆ. ಈ ಯಶಸ್ಸಿನ ಹಿಂದೆ ಪಕ್ಸದ ಸಂಸ್ಥಾಪಕ ಶ್ರೀ ದೇವೇಗೌಡರ ಕಟಿಬದ್ದ ಹೋರಾಟ. ಅವಿರತ ಪರಿಶ್ರಮವೆ ಕಾರಣವಾಗಿದೆ. ಇದನ್ನು ಎಂದೆಂದೂ ನಾವು ನೆನಪಲ್ಲಿಟ್ಟುಕೊಳ್ಳಬೇಕು ಎಂದರು
ಎರಡು ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿ ಕಠಿಣ ಸವಾಲುಗಳನ್ನು ಮೆಟ್ಟಿ ರೈತರ, ಮಹಿಳೆಯರ, ಯುವಕರ ಆಶಾಕಿರಣವಾಗಿ ಪಕ್ಷವನ್ನು ಬಲಪಡಿಸಿದ್ದಾರೆ ಪ್ರಾದೇಶಿಕ ಪಕ್ಷಗಳಲ್ಲಿ ಘಟ್ಟಿ ಬೇರುರಿದ ಪಕ್ಷ ಎಂದರೆ ಜೆಡಿಎಸ್ ಎಂದರು
ಈ ಸಂದರ್ಭದಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು
