Saturday, August 8, 2026
Homeವಿಶೇಷಚಳಿಗಾಲದಲ್ಲಿ ಸಂಜೆ ಸ್ನ್ಯಾಕ್ಸ್‌ ಬಿಸಿ-ಬಿಸಿ ಅಲೂಬೋಂಡಾ

ಚಳಿಗಾಲದಲ್ಲಿ ಸಂಜೆ ಸ್ನ್ಯಾಕ್ಸ್‌ ಬಿಸಿ-ಬಿಸಿ ಅಲೂಬೋಂಡಾ

Telegram Group
Join Now

ಚಳಿಗಾಲದಲ್ಲಿ ಸಂಜೆಯಾದರೆ ಸಾಕು ಬಿಸಿ-ಬಿಸಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಅದರಲ್ಲೂ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲಾರಿಗೂ ಇಷ್ಟವಾಗೋದು ಬೋಂಡಾ-ಬಜ್ಜಿ. ಬಾಯಿಗೆ ರುಚಿ-ರುಚಿಯಾಗಿ ಆಲೂಬೋಂಡಾ ಸಿಕ್ಕರಂತೂ ಅದರ ಮಜವೇ ಬೇರೆ. ಹಾಗಿದ್ರೆ ಆಲೂಬೋಂಡಾ ಮಾಡುವುದು ಹೇಗೆ ಅಂತ ತಿಳಿದು ಕೊಂಡು. ಮನೆಯಲ್ಲೊಮ್ಮೆ ಈ ಚಳಿಗಾಲದಲ್ಲಿ ಟ್ರೈ ಮಾಡಿ

ಆಲೂ ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳು:

* 4-5 ಬೇಯಿಸಿದ ಆಲೂಗಡ್ಡೆ
* 2 ಹಸಿ ಮೆಣಸಿನಕಾಯಿ
* ¾ ಕಪ್ ಕಡಲೆಹಿಟ್ಟು + ¼ ಕಪ್ ಮೈದಾ ಅಥವಾ ಕಾರ್ನ್ ಫ್ಲೋರ್‌
* 1 ಟೀಸ್ಪೂನ್ ಗರಂ ಮಸಾಲಾ
* ಚಿಟಕಿ ಅರಿಶಿನ
* ಚಿಕ್ಕದಾಗಿ ಕಟ್‌ ಮಾಡಿದ ಕರಿಬೇವಿನ ಎಲೆ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಟೇಬಲ್ ಸ್ಪೂನ್ ನಿಂಬೆ ರಸ
* ರುಚಿಗೆ ತಕ್ಕಷ್ಟು ರುಚಿಗೆ ಉಪ್ಪು
* ಎಣ್ಣೆ

ಮಾಡುವ ವಿಧಾನ

    *ಆಲೂಗಡ್ಡೆಗಳನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ, ನಂತರ ಸಿಪ್ಪೆ ತೆಗೆದು ಚೆನ್ನಾಗಿ ಹಿಸುಕಿ ಮ್ಯಾಶ್ ಮಾಡಿಕೊಳ್ಳಿ

    * ಹಿಸುಕಿದ ಆಲೂಗಡ್ಡೆಗೆ ರುಚಿಗೆ ತಕ್ಕ ಉಪ್ಪು, ಗರಂ ಮಸಾಲ, ಕತ್ತರಿಸಿದ ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಉಂಡೆಗಳಾಗಿ ಕಟ್ಟಿ

    * ಬೇರೆ ಪಾತ್ರೆಯಲ್ಲಿ ಕಡಲೆಹಿಟ್ಟು, ಮೈದಾ, ಉಪ್ಪು, ಗರಂ ಮಸಾಲಾ, ಅರಿಶಿನ ಸೇರಿಸಿ, ಸ್ವಲ್ಪ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದದಷ್ಟು ಬ್ಯಾಟರ್ ತಯಾರಿಸಿ.

    * ಬಾಣಲೆಯಲ್ಲಿ ಎಣ್ಣೆ ಕುದಿಯಲು ಇಟ್ಟು, ಆಲೂಗೆಡ್ಡೆ ಮಿಶ್ರಣದಿಂದ ಕಟ್ಟಿದ ಉಂಡೆಗಳನ್ನು ಕಲಸಿಟ್ಟ ಹಿಟ್ಟಿನಲ್ಲಿ ಅದ್ದಿ ಕುದಿಯುತ್ತಿರುವ ಎಣ್ಣೆಗೆ ಹಾಕಿ ಕಂದು ಬಣ್ಣ ಬಂದ ನಂತರ ತೆಗೆದರೆ ರುಚಿಕರವಾದ ಅಲೂ ಬೋಂಡಾ ರೆಡಿ.

    ರೆಡಿಯಾದ ಬೋಂಡಾವನ್ನು ಟೀ‑ಕಾಫಿ ಜೊತೆ ಬಿಸಿ ಬಿಸಿಯಾಗಿ ಸರ್ವ್ ಮಾಡಿ ಸವಿಯಿರಿ!


    RELATED ARTICLES

    LEAVE A REPLY

    Please enter your comment!
    Please enter your name here

    - Advertisment -

    Most Popular

    Recent Comments