ಸಕಲೇಶಪುರ : ವಿದ್ಯುತ್ ತಗುಲಿ ಯುವ ರೈತ ದುರ್ಮರಣ ಹೊಂದಿರುವ ಘಟನೆ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಕೆಲವಳ್ಳಿ ಗ್ರಾಮದಲ್ಲಿ ನಡೆದಿದೆ.
ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವಳ್ಳಿ ಗ್ರಾಮದ ಅಭಿಷೇಕ್ (36) ಮೃತ ಯುವ ರೈತ.ಇಂದು ಬೆಳಗ್ಗೆ ಕೃಷಿ ಚಟುವಟಿಕೆಗೆ ತೆರಳಿದ್ದ ವೇಳೆ ಸಂಭವಿಸಿದ ಅವಘಡ.
ಆಲ್ಯೂಮಿನಿಯಂ ಏಣಿ 11 ಕೆ.ವಿ. ವಿದ್ಯುತ್ ಮಾರ್ಗಕ್ಕೆ ತಗುಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಭಿಷೇಕ್ ಸಾವನ್ನಪ್ಪಿದ್ದಾರೆ. ಅಭಿಷೇಕ ತಂದೆ ನಿವೃತ್ತ ಸೈನಿಕರಾಗಿದ್ದು, ತಂದೆಯ ನಿಧನದ ಬಳಿಕ ಕೃಷಿಯ ಜವಾಬ್ದಾರಿ ಹೊತ್ತುಕೊಂಡಿದ್ದನು.ಕೃಷಿಯನ್ನೇ ನಂಬಿಕೊಂಡು ಉತ್ತಮವಾಗಿ ಕೃಷಿ ಚಟುವಟಿಕೆ ನಡೆಸುತ್ತಿದ್ದ ಯುವ ರೈತ. ಅಭಿಷೇಕ್ ಅವರ ಆಕಸ್ಮಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
