ಚಿಕ್ಕಮಗಳೂರು : ಅಡಿಕೆ ತೋಟದ ಮನೆಯ ನೀರಿನ ತೊಟ್ಟಿಯಲ್ಲಿ ಇಬ್ಬರು ಕಾರ್ಮಿಕರ ಶವ ಪತ್ತೆಯಾಗಿರುವ ಘಟನೆ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ.
ಆನಂದ್ (48), ಜುಂಜಾನಾಯ್ಕ್ (65) ಪತ್ತೆಯಾದ ಮೃತದೇಹ. ಇಂದು ಬೆಳಗ್ಗೆ ಅಡಿಕೆ ಸುಲಿಯಲು ತೆರಳಿದ್ದ ಇಬ್ಬರು ಕಾರ್ಮಿಕರು ಅಮೃತಾಪುರ ಗ್ರಾಮದ ಮುರುಗೇಶ್ ಎಂಬುವವರಿಗೆ ಸೇರಿದ ಅಡಿಕೆ ತೋಟ.ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆಯೋ ಅಥವ ಕೊಲೆಯೋ ಸ್ಪಷ್ಟವಾಗಿಲ್ಲ ಇಬ್ಬರ ಮೃತದೇಹ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾವಿಗೆ ನಿಖರ ಕಾರಣದ ಹಿಂದೆ ಬಿದ್ದಿರುವ ಪೊಲೀಸರು.
