Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ: ಜನಪ್ರಿಯ ಶಾಸಕರೇ ಇತ್ತ ಗಮನಿಸಿ: ರಸ್ತೆಯಲ್ಲಿನ ಬಂಡೆ ತೆರವಿಗೆ ಸಾಮಾಜಿಕ ಕಾರ್ಯಕರ್ತನ ಮನವಿ

ಮೂಡಿಗೆರೆ: ಜನಪ್ರಿಯ ಶಾಸಕರೇ ಇತ್ತ ಗಮನಿಸಿ: ರಸ್ತೆಯಲ್ಲಿನ ಬಂಡೆ ತೆರವಿಗೆ ಸಾಮಾಜಿಕ ಕಾರ್ಯಕರ್ತನ ಮನವಿ

ಮೂಡಿಗೆರೆ: ವಿಧಾನಸಭಾ ಕ್ಷೇತ್ರದ ಪ್ರಮುಖ ರಾಜ್ಯ ಹೆದ್ದಾರಿ ಮೂಡಿಗೆರೆಯಿಂದ ಹಾನುಬಾಳು ಮಾರ್ಗವಾಗಿ ಸಕಲೇಶಪುರ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿ ಕಜ್ಜಹಳ್ಳಿ ಜಂಕ್ಷನ್ ಹುರುಡಿ ಕಿರಗುಂದ ಮಧ್ಯೆ ಭಾಗದ ರಸ್ತೆಯ ತಿರುವುವಿನಲ್ಲಿ ಬಂಡೆ ಕಲ್ಲು ಇದ್ದು ಈ ಜಾಗ ವಾಹನ ಸವಾರರಿಗೆ ತುಂಬಾ ಅಪಾಯಕಾರಿ ಆಗಿದೆ
ಅದು ವಿಶೇಷ ವಾಗಿ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್.ಮಂಗಳೂರು ಕಡೂರು, ಉಡುಪಿ ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಸಾಧ್ಯತೆ ಹೆಚ್ಚಿದೆ.

ಈ ರಸ್ತೆ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆ ಆಗಿದೆ, ಆ ಸಂದರ್ಭದಲ್ಲಿ ಈ ರಸ್ತೆಯು ತುಂಬಾ ವಾಹನ ದಟ್ಟಣೆ ಯಿಂದ ಕೂಡಿರುತ್ತದೆ.ಈ ತಿರುವು ತುಂಬಾ ಕಿರಿದಾಗಿದ್ದು ವಾಹನಗಳಿಗೆ ಮುಂದೆ ರಸ್ತೆ ಕಾಣುವುದಿಲ್ಲ.


ಈ ನಿಟ್ಟಿನಲ್ಲಿ ಈ ತಿರುವಿನಲ್ಲಿರುವ ಬಂಡೆ ಯನ್ನು ತೆರವು ಗೊಳಿಸಿ ರಸ್ತೆಯನ್ನು ಸ್ವಲ್ಪ ವಿಸ್ತರಿಸಿದರೆ ಮುಂದೆ ಆಗುವ ಸಂಭವನೀಯ ಅಪಘಾತ ವನ್ನು ತಪ್ಪಿಸಿ ಆಗಬಹುದಾದ ಸಾವು ನೋವು ತಪ್ಪಿಸ ಬಹುದು, ಈ ನಿಟ್ಟಿನಲ್ಲಿ ಮೂಡಿಗೆರೆ ಕ್ಷೇತ್ರದ, ಸರ್ಕಾರದ ಪ್ರಭಾವಿ ಶಾಸಕ ರಾದ ಶ್ರೀಯುತ ನಯನ ಮೋಟಮ್ಮ ಅವರು ಗಮನ ಹರಿಸಿ ಸಮಸ್ಯೆ ಬಗೆ ಹರಿಸಬೇಕು


ಬಂಡೆ ಒಡೆಯಲು ಈಗಿನ ಅರ್ಥ್ ಮೂವರ್ಸ್ ಬ್ರೇಕರ್‌ ಗಳು ಲಭ್ಯವಿದೆ ಅಥವಾ ಕೆಮಿಕಲ್ ಹಾಕಿ ಒಂದೇ ದಿನದಲ್ಲಿ ಬಂಡೆ ಒಡೆಯುವವರು ಇದ್ದಾರೆ ಬೇಕಾದರೆ ಅವರ ಸಂಪರ್ಕ ಕೊಡುವುದಾಗಿ ಶಾಸಕರಲ್ಲಿ ಸಾಮಾಜಿಕ ಹೋರಾಟಗಾರ ಪೃಥ್ವಿ ಅವರೇಕಾಡು ಮನವಿ ಮಾಡಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!