Friday, June 26, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಸಫಾರಿಗೆ ಹೋಗುತ್ತಿದ್ದವರ ಜೀಪ್ ಮೇಲೆ ಕಾಡಾನೆ ದಾಳಿ: ಪ್ರವಾಸಿಗರು ಜಸ್ಟ್ ಮಿಸ್

ಚಿಕ್ಕಮಗಳೂರು: ಸಫಾರಿಗೆ ಹೋಗುತ್ತಿದ್ದವರ ಜೀಪ್ ಮೇಲೆ ಕಾಡಾನೆ ದಾಳಿ: ಪ್ರವಾಸಿಗರು ಜಸ್ಟ್ ಮಿಸ್

ಚಿಕ್ಕಮಗಳೂರು: ಸಫಾರಿಗೆ ಹೋಗುತ್ತಿದ್ದ ಪ್ರವಾಸಿಗರ ಜೀಪ್ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆ ಬಳಿ ನಡೆದಿದೆ.

ಜಂಗಲ್ ಲಾಡ್ಜ್‌ಗೆ ಸೇರಿದ ಜೀಪ್‍ನಲ್ಲಿ ಪ್ರವಾಸಿಗರು ಸಫಾರಿಗೆ ತೆರಳಿದ್ದರು. ಈ ವೇಳೆ ಭದ್ರಾ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಜೀಪನ್ನು ಕಾಡಾನೆ ಅಟ್ಟಿಸಿಕೊಂಡು ಬಂದಿದೆ. ದಾಳಿಗೆ ಮುಂದಾಗುತ್ತಿದ್ದಂತೆ ಚಾಲಕ ಚಾಣಾಕ್ಷತನದಿಂದ ಜೀಪ್‍ನ್ನು ವೇಗವಾಗಿ ರಿವರ್ಸ್ ತೆಗೆದುಕೊಂಡು ಬಂದಿದ್ದಾನೆ.

ಚಾಲಕನ ಸಮಯಪ್ರಜ್ಞೆಯಿಂದ ಸಲಗದ ದಾಳಿಯಿಂದ ಪ್ರವಾಸಿಗರು ಜಸ್ಟ್ ಮಿಸ್ ಆಗಿದ್ದಾರೆ. ಆನೆ ಅಟ್ಟಿಸಿಕೊಂಡು ಬಂದಿರುವ ವೀಡಿಯೋ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments