Thursday, March 26, 2026
Homeಕ್ರೈಮ್ಚಿಕ್ಕಮಗಳೂರು: ಕಾಫಿನಾಡಲ್ಲಿ ನಿಲ್ಲದ ಚಿರತೆ ಹಾವಳಿ: ಬಾಲಕನ ಮೇಲೆ ಭೀಕರ ದಾಳಿ!

ಚಿಕ್ಕಮಗಳೂರು: ಕಾಫಿನಾಡಲ್ಲಿ ನಿಲ್ಲದ ಚಿರತೆ ಹಾವಳಿ: ಬಾಲಕನ ಮೇಲೆ ಭೀಕರ ದಾಳಿ!

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಚಿರತೆ ಹಾವಳಿಗೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಬಾಲಕಿಯ ಹೊತ್ತೊಯ್ದು ಚಿರತೆ ಬಲಿ ಪಡೆದ ಪ್ರಕರಣ ಮಾಸುವ ಮುನ್ನವೇ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ದೋರನಾಳು ಭೈರಾಪುರದಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಈ ವೇಳೆ ಹೆದರದೇ ಬಾಲಕ ಚಿರತೆ ಜೊತೆ ಸೆಣಸಾಡಿ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.

11 ವರ್ಷದ ಬಾಲಕ ಹೃದಯ್​​ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.ಮನೆಯ ಬಳಿ ನಿಂತಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದ್ದು, ಗಾಯಾಳು ಬಾಲಕನನ್ನು ಮೆಗ್ಗಾನ್​​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಸಿಟ್ಟಿಗೆದ್ದ ಚಿರತೆ ಆ ಬಳಿಕ ಕರುವಿನ ಮೇಲೂ ದಾಳಿ ನಡೆಸಿದೆ. ಕೊನೆಗೂ ಕರುವನ್ನ ಕೂಡ ಚಿರತೆ ಬಾಯಿಂದ ರಕ್ಷಿಸುವಲ್ಲಿ ಬಾಲಕ ಯಶಸ್ವಿಯಾಗಿದ್ದಾನೆ. ಬಾಲಕನ ಶೌರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿದ್ದಾರೆ.

ವಾರದ ಹಿಂದಷ್ಟೇ ಬೀರೂರು ಸಮೀಪದ ನವಿಲೇಕಲ್ಲು ಗುಡ್ಡ ಗ್ರಾಮದಲ್ಲಿ ಚಿರತೆ ದಾಳಿಗೆ 5 ವರ್ಷದ ಮಗು ಬಲಿಯಾಗಿತ್ತು. ಮನೆಯ ಹಿಂದೆ ನಿಂತಿದ್ದ ಬಾಲಕಿಯನ್ನು ತಂದೆಯ ಮುಂದೆಯೇ ಚಿರತೆ ಹೊತ್ತೊಯ್ದಿತ್ತು. ಘಟನೆಯಲ್ಲಿ ಕೂಲಿ ಕಾರ್ಮಿಕ ಬಸವರಾಜ ಎಂಬುವರ ಪುತ್ರಿ ಸಾನ್ವಿ (5) ಮೃತಪಟ್ಟಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!